• November 22, 2024

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಸುದ್ದಿಗೋಷ್ಠಿ

 ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಸುದ್ದಿಗೋಷ್ಠಿ

 

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿಯ ಬಗ್ಗೆ ಶಾಸಕ ಹರೀಶ್ ಪೂಂಜ ಇಲ್ಲಸಲ್ಲದ ಆರೋಪವನ್ನು ಮಾಡಿದ್ದಾರೆ.20% ಹಿಂದುತ್ವ, 80% ರೌಡಿಸಂ ಎಂದು ಆರೋಪಿಸಿದರು. ಯಾವ ಮೌಲ್ಯಮಾಪನದಲ್ಲಿ ಮಾಡಿದ್ದಾರೆ? ಹರೀಶ್ ಪೂಂಜರ ಹಿಂದುತ್ವವನ್ನು ಚಕ್ ಮಾಡಬೇಕು. ನಾವು ಹಿಂದೂ ಸಂಘಟನೆಯನ್ನು ಬೆಳೆಸುವವರು, ನಾವು ಎಂದಿಗೂ ಕೂಡ ಹಿಂದುತ್ವ ವಿಷಯದಲ್ಲಿ ಭೇದ ಭಾವ ಮಾಡಿಲ್ಲ. ಹಿಂದುತ್ವ ವಿಷಯದಲ್ಲಿ ನಾವು ಒಂದೇ. ಕೇಸರಿ ಹಾಕಿ ಬಿಕ್ಷೆ ಬೇಡುವವರು ಎಂದು ಅಸಕರು ನಮ್ಮನ್ನು ಆರೋಪಿಸಿದರು. ಇವರಿಗೆ ನಾವು ಮತ ನೀಡಬೇಕಾ?ನಾವೇನು ತಪ್ಪು ಮಾಡಿದ್ದೇವೆ? ನಮ್ಮ ನಾಯಕನಿಗೆ ರೌಡಿಸಂ ಎಂದು ಪಟ್ಟ ಕಟ್ಟಿದ್ದಾರೆ ಶಾಸಕರಿಗೆ ನಾವೇನು ಮಾಡಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಚಾಲಕರಾದ ಮನೋಜ್ ಕುಂಜರ್ಪ ಪ್ರಶ್ನಿಸಿದರು.

ಅವರು ಜೂನ್ 2 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಹಿಂದೂ ಸಂಘಟನೆಯನ್ನು ಈಗ ಸಮಾಜದಲ್ಲಿ ತಾತ್ಸಾರವಾಗಿ ನೋಡುವುದೇ ಈಗಿನ ದುರಂತ.ಮಹೇಶ್ ಶೆಟ್ಟಿ ತಿಮರೋಡಿಯವರ ಹಿಂದುತ್ವ ಅಂದ್ರೆ 2014 ನೇ ಇಸವಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದವರು ಮಹೇಶ್ ಶೆಟ್ಟಿ ತಿಮರೋಡಿ. ಇವರು ಆರ್ ಎಸ್ ಎಸ್ ಗೆ ನೀಡುವಂತಹ ಗೌರವವೇ ಇವರ ಹಿಂದುತ್ವವನ್ನು ತೋರಿಸುತ್ತದೆ. ನಮ್ಮ ಹಿಂದುತ್ವ ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಇದೆಯಾವತ್ತೂ ನಾವು ಹಿಂದುತ್ವವನ್ನು ದೂರ ಮಾಡುವ ಸಂದರ್ಭ ಎಂದಿಗೂ ಇಲ್ಲ. ನಮ್ಮ ಹಿಂದುತ್ವ ಏನೂ ಎಂಬುವುದನ್ನು ತೋರಿಸಲು ತಯಾರಿದ್ದೇವೆ. ಆರ್ ಎಸ್ ಎಸ್ ಮೇಲೆ ನಮಗೆ ಅಭಿಮಾನವಿದೆ. ಅದೇ ರೀತಿ ಬೇರೆ ಹಿಂದೂ ಸಂಘಟನೆಯ ಮೇಲೂ ಗೌರವ , ವಿಶ್ವಾಸವಿದೆ. ಸರಕಾರ ಒಂದು ವೇಳೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ನಾವು ಮುಂದಿನ ಸಾಲಲ್ಲಿ ನಿಂತು ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಪ್ರಜ್ವಲ್ ಕೆ ಗೌಡ, ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷರು ಹರೀಶ್ ಕುಮಾರ್ ಬರಮೇಲು, ಸೌಜನ್ಯ ಳ ತಾಯಿ ಕುಸುಮ ಚಂದಪ್ಪ ಗೌಡ, ಸೌಜನ್ಯ ಮಾವ ವಿಠಲ ಗೌಡ ಮೊದಲಾದವರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!