ಬೆಳ್ತಂಗಡಿ: ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ , ಕಾನೂನು ಅರಿವು ಕಾರ್ಯಕ್ರಮ ಮತ್ತು ಗುರುತು ಚೀಟಿ ವಿತರಣೆ
ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ, ವಕೀಲರ ಸಂಘ ಬೆಳ್ತಂಗಡಿ ಹಾಗೂ ಸ್ಪಂದನ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ ) ಜಿಲ್ಲಾ ಸಮಿತಿ ಬೆಳ್ತಂಗಡಿ ಇವರ ಸಂಯುಕ್ತ ಆಶಯದಲ್ಲಿ ಮೇ 31 ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ ಹಾಗೂ ಕಾನೂನು ಅರಿವು ಕಾರ್ಯಕ್ರಮ ಮತ್ತು ಗುರುತು ಚೀಟಿ ವಿತರಣೆ ನಡೆಯಿತು.
ಬೆಳ್ತಂಗಡಿ ಜೆ ಎಂ ಎಫ್ ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ ಎಚ್ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ವೃತ್ತ ಕಾರ್ಮಿಕ ನಿರೀಕ್ಷಕ ರಾದ ಎಸ್ ಎನ್ ಹರೀಶ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ ಎಸ್ ಹಾಗೂ ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್ ಟೋಸರ್, ಸಹಾಯಕ ಸರಕಾರಿ ಅಭಿಯೋಜಕರು ಆಶಿತಾ ಬೆಳ್ತಂಗಡಿ. ಅರೆಕಾಲಿಕ ಸಲಹೆಗಾರ ರಾಘವೇಂದ್ರ ಶೆಟ್ ಭಾಗವಹಿಸಿದರು.
ಸ್ಪಂದನ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ವಸಂತ ನಡ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾಡಿ ಕಾರ್ಯಕ್ರಮದ ಕೊನೆಗೆ ವಂದಿಸಿದರು ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಹಿರಿಯ ವಕೀಲರಾದ ಶಿವಕುಮಾರ್ ಎಸ್ಎಂ ನವರು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಬಗ್ಗೆ ಮಾತಾಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಗುರುತು ಚೀಟಿ ವಿತರಿಸಲಾಯಿತು ಹಾಗೂ ಕಾರ್ಮಿಕರ ವಿವಿಧ ಸೌಲಭ್ಯಗಳು ಬಾರದೆ ಇರುವ ಬಗ್ಗೆ ಸಂಘದ ವತಿಯಿಂದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಲ್ಲಿ ಮನವಿ ನೀಡಲಾಯಿತು.
ಮನವಿ ವಿವರ :-
◼️ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಕುವ ಅವಧಿ ವಿಸ್ತರಣೆ ಹಾಗೂ ಮಂಜೂರಾದ ಮೊತ್ತ ವಿಳಂಬ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸೇವಾ ಸಿಂಧು ಮತ್ತು ಯಶಸ್ವಿಯಲ್ಲಿ ಕಾಲಾವಕಾಶ ನೀಡಿದರೆ ಇತ್ತೀಚೆಗಷ್ಟೇ ರಿಜಿಸ್ಟರ್ ನಂಬರ್ ಸಿಕ್ಕಿದ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ
◾ ಕುಟುಂಬ ಪಿಂಚಣಿ ಪಡೆಯಲು ಅವಕಾಶವಿದ್ದರೂ ಅರ್ಜಿ ಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿಲ್ಲ ಇದನ್ನು ಸರಿಪಡಿಸಬೇಕು ◼️ಯಾವುದೇ ಸಹಾಯಧನದ ಅರ್ಜಿ ಮಂಜೂರಾಗಬೇಕಾದರೆ ಕಾರ್ಮಿಕ ನಿರೀಕ್ಷಕರು ಸಹಿ ಮಾಡಿದ ದಿನಾಂಕವನ್ನು ಪರಿಗಣಿಸುತ್ತಾರೆ ಇದನ್ನು ಪರಿಗಣಿಸದೆ ಕಾರ್ಮಿಕನು ಇಲಾಖೆಗೆ ಹೊಸ ಗುರುತು ಚೀಟಿ ಮತ್ತು ಗುರುತು ಚೀಟಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ದಿನಾಂಕವನ್ನು ಪರಿಗಣಿಸಬೇಕು
◼️ಕಾರ್ಮಿಕರು ಪಿಂಚಣಿಗೆ ಅರ್ಜಿ ಹಾಕಲು ಅವರಿಗೆ ಅರ್ಜಿ ಹಾಕಬೇಕು ಈಗಿನ ಆದೇಶದ ಪ್ರಕಾರ ಪಿಂಚಣಿ ಪಡೆಯಲು ಅವಕಾಶವಿಲ್ಲ ನಮ್ಮ ಪ್ರಕಾರ ಕಾರ್ಮಿಕನಿಗೆ 60 ವರ್ಷ ಆಗಿ ಕಾಲಮಿತಿ ಇಲ್ಲದೆ ಯಾವುದೇ ಸಮಯದಲ್ಲಿ ಅರ್ಜಿ ಹಾಕಿದರು ಅರ್ಜಿ ಹಾಕಿದ ನಂತರ ಪಿಂಚಣಿ ವ್ಯವಸ್ಥೆ ನೀಡಬೇಕು ಇದಕ್ಕೆ ಕಾನೂನು ಸೇವೆಗಳ ಸಮಿತಿ ವ್ಯವಸ್ಥೆ ಮಾಡಬೇಕು
◼️ 2021- 22 ನೇ ಸಾಲಿನ 10ನೇ ತರಗತಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದು ಕಾರ್ಮಿಕರ ಮಕ್ಕಳಿಗೆ ರೂ. 25,000 ಮೌಲ್ಯದ ಒಳಗೆ ನಗದು ಅಥವಾ ಕಿಟ್ ರೂಪದಲ್ಲಿ ಸಹಾಯ ಮಾಡುದಾಗಿ ಅರ್ಜಿ ತೆಗೆದುಕೊಂಡರು ಯಾವುದೇ ರೀತಿಯ ಇಲಾಖೆಯಿಂದ ಪ್ರತಿಕ್ರಿಯೆ ಇಲ್ಲ
◼️ಕಾರ್ಮಿಕರಿಗೆ ಬೇರೆಬೇರೆ ರೀತಿಯಲ್ಲಿ ಕಿಟ್ಟಿ ವಿತರಣೆ ಮಾಡಲಾಯಿತು ಆದರೆ ಸಂಬಂಧಪಟ್ಟ ಎಲ್ಲಾ ಕಾರ್ಮಿಕರಿಗೆ ಸಮಾನ ದೃಷ್ಟಿಕ್ಕಿಟ್ ವಿತರಣೆ ಮಾಡಬೇಕಿತ್ತು ಆದರೆ ಕೆಲವೇ ಕಾರ್ಮಿಕರಿಗೆ ಮಾತ್ರ ಸಿಕ್ಕಿದೆ ಈ ರೀತಿ ಇನ್ನು ಮುಂದೆ ಆಗಬಾರದು ಕಿಟ್ ವಿತರಣೆ ಮಾಡಲು ಕಷ್ಟವಾದರೆ ಎಲ್ಲಾ ಕಾರ್ಮಿಕರಿಗೆ ಅದರ ಮಾತು ಉಳಿತಾಯ ಖಾತೆಗೆ ಹಣ ಜಮೆ ಮಾಡಬೇಕು
◼️ಐದನೇ ಮತ್ತು ಎಂಟನೇ ತರಗತಿ ಮಕ್ಕಳಿಗೆ ಮಾತ್ರ ಸ್ಕೂಲ್ ಕಿಟ್ ನೀಡಲಾಗಿದೆ ಆದರೆ ಎಲ್ಲಾ ಮಕ್ಕಳಿಗೆ ಸಿಕ್ಕಿಲ್ಲ
◼️ ಫಸ್ಟ್ ಪಿಯುಸಿ ಮತ್ತು ಸೆಕೆಂಡ್ ಪಿಯುಸಿ ಮಕ್ಕಳಿಗೆ ಗಿಫ್ಟ್ ವಿತರಿಸಲು ಕೇವಲ ಎರಡು ದಿನ ಅವಕಾಶ ನೀಡಲಾಯಿತು. ಹೆಚ್ಚಿನ ಮಕ್ಕಳಿಗೆ ವಿಷಯವೇ ತಿಳಿದಿಲ್ಲ
◼️ ಇಲಾಖೆಯ ಗಿಫ್ಟ್ ಕಟ್ಟಡ ಕಾರ್ಮಿಕರ ಎಲ್ಲಾ ಮಕ್ಕಳಿಗೆ ತರಗತಿವಾರು ನೀಡಬೇಕು ಇಲ್ಲವಾದರೆ ವಿದ್ಯಾರ್ಥಿ ವೇತನಕ್ಕೆ ಅದರ ಬಾಬ್ತು ಹೆಚ್ಚು ಹಣ ಜಮೆ ಮಾಡಬೇಕು.