ಕನ್ಯಾಡಿ || 9 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ
ಕನ್ಯಾಡಿ || : ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ || ಇದರ ಆಶ್ರಯದಲ್ಲಿ ನಡೆಯಲಿರುವ 9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಸುಪ್ರೀತಾ ಪುರ್ಲಿದ ಪಲ್ಕೆ, ಕಾರ್ಯದರ್ಶಿಯಾಗಿ ಶ್ರೀಮತಿ ಸುಜಾತ ಬೊಳ್ಮ, ಕೋಶಾಧಿಕಾರಿಯಾಗಿ ಶ್ರೀಮತಿ ಮಮತಾ ಪಿಜತ್ತನಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಾಧಕ್ಷರಾಗಿ ಗೋವಿಂದ ಸುವರ್ಣ ಪೊಂಗಾರು, ಉಪಾಧ್ಯಕ್ಷರುಗಳಾಗಿ ಮನೋಹರ್ ರಾವ್ ಯು.ಬಿ, ಪ್ರಭಾಕರ ಗೌಡ ಬೊಳ್ಮ, ಸುಂದರ ಗೌಡ ಬಜಿಲ, ವಸಂತ ನಾಯ್ಕ ಬೆರ್ಕೆ, ಮಹಾಬಲ ನಾಯ್ಕ ಪುರ್ಲಿದ ಪಲ್ಕೆ, ವಿಮಲ ಬಜಿಲ, ಸಂಘಟನಾ ಕಾರ್ಯದರ್ಶಿಯಾಗಿ ಸಚಿನ್ ಗೌಡ ಕಲ್ಮಂಜ, ಸಹ ಕಾರ್ಯದರ್ಶಿಗಳಾಗಿ ಮಹೇಶ್ ಕಿಣಿ, ಸೃಜನ್ ಪಜಿರಡ್ಕ, ಸಹ ಕೋಶಾಧಿಕಾರಿಗಳಾಗಿ ಅಜಿತ್ ಪೂಜಾರಿ ಬೆರ್ಕೆ, ಶ್ರೇಯಸ್ ಎಂ. ರಾವ್, ಸಂಯೋಜಕಿ ಶ್ರೀಮತಿ ಚಂದ್ರಾವತಿ ಬಜಿಲ, ಗೌರವ ಸಲಹೆಗಾರರಾಗಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಿ.ಜಿ., ಪ್ರಭಾಕರ್ ಕನ್ಯಾಡಿ, ಹರಿದಾಸ್ ಗಂಭೀರ್ ಧರ್ಮಸ್ಥಳ, ರವಿ ಭಟ್ ಪಜಿರಡ್ಕ, ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ತುಕಾರಾಮ ಸಾಲ್ಯಾನ್ ಆರ್ಲ, ರತ್ನವರ್ಮ ಜೈನ್ ಧರ್ಮಸ್ಥಳ, ಚಂದ್ರಶೇಖರ್ ಶೆಟ್ಟಿ ನಾರ್ಯ, ರಾಜೇಂದ್ರ ಅಜ್ರಿ, ಶ್ರೀನಿವಾಸ ರಾವ್ ಪಿ., ಸುಂದರ ಗೌಡ ಪುಡ್ಕೆತ್ತು, ಉದಯ ಭಟ್ ಎಂ.ಜಿ., ಕರಿಯ ನಾಯ್ಕ ನೆಲ್ಲಿಗುಡ್ಡೆ, ಶ್ರೀಮತಿ ಧನಲಕ್ಷ್ಮೀ ಜನಾರ್ದನ್. ಇವರುಗಳನ್ನು ನೂತನ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಸ್ವಾಗತ ಸಮಿತಿ, ಅರ್ಥಿಕ ಸಮಿತಿ, ಪೂಜಾ ಸಮಿತಿ, ಪ್ರಸಾದ ವಿತರಣೆ ಸಮಿತಿ, ಭಜನಾ ಸಮಿತಿ, ಶೋಭಾಯಾತ್ರೆ ಸಮಿತಿ, ಆಹಾರ ಸಮಿತಿ, ಮಹಿಳಾ ಸಮಿತಿ, ಅಲಂಕಾರ ಸಮಿತಿ, ರಕ್ಷಣಾ ಸಮಿತಿ, ಸಾಂಸ್ಕೃತಿಕ ಸಮಿತಿ, ಹಿರಿಯ ವಿದ್ಯಾರ್ಥಿಗಳ ‘ಮೆಲುಕು’ ಸಮಿತಿಗಳನ್ನು ರಚಿಸಿದ್ದು, ಸಂಯೋಜಕರನ್ನು ಹಾಗೂ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿಯಲ್ಲಿ ಅಧ್ಯಕ್ಷರಾಗಿ ರಾಜೇಶ್.ಪಿ, ಉಪಾಧ್ಯಕ್ಷರಾಗಿ ಅರುಣ್ ನಾಯ್ಕ ನೆಲ್ಲಿಗುಡ್ಡೆ, ಕಾರ್ಯದರ್ಶಿಯಾಗಿ ಗಣೇಶ್ ಗೌಡ ಬಜಿಲ, ಕೋಶಾಧಿಕಾರಿಯಾಗಿ ಬಾಲಕೃಷ್ಣ ರಾವ್ ಜವಾಬ್ದಾರಿಯಲ್ಲಿದ್ದು, ನೂತನವಾಗಿ ಸಂಯೋಜಕರಾಗಿ ರಾಘವ ಕುರ್ಮಣಿ, ಹಾಗೂ ಸಹ ಕಾರ್ಯದರ್ಶಿಯಾಗಿ ವಿದ್ಯಾಧರ ರೈ ಪಜಿರಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.