ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ ಕಾರ್ಯಗಾರ
ಬೆಳ್ತಂಗಡಿ : ಮೇ 22ರಂದು ಜೆಸಿಐ ಬೆಳ್ತಂಗಡಿಯಲ್ಲಿ ಸದಸ್ಯರಿಗೆ ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಜೆಸಿಐ ಭಾರತದ ವಲಯ 15ರ ವಲಯಡಳಿತ ನಿರ್ದೇಶಕರಾದ ಪ್ರಶಾಂತ್ ಲಾಯಿಲ ತರಬೇತಿ ನೀಡಿದರು.
ಈ ಕಾರ್ಯಗಾರದ ಅಧ್ಯಕ್ಷತೆ ಯನ್ನು ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ಶಂಕರ್ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್ ಮತ್ತು ಜೂನಿಯರ್ ಜೆಸಿ ಅಧ್ಯಕ್ಷರಾದ ರಾಮಕೃಷ್ಣ ಶರ್ಮಾ ಉಪಸ್ಥಿತರಿದ್ದರು.
ಘಟಕದ ಸದಸ್ಯ ಚಂದ್ರಹಾಸ್ ಬಳಂಜ ವೇದಿಕೆ ಆಹ್ವಾನವಿತ್ತರು. ಜೂನಿಯರ್ ಜೆಸಿ ಸದಸ್ಯೆ ಗನ್ಯ ಜೆಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಸುಧೀರ್ ಕೆ ಎನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.
ಜೆಸಿಐ ಬೆಳ್ತಂಗಡಿಯ ಪೂರ್ವಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.