• October 13, 2024

ಚಂದನವನದ ಪ್ರಮುಖ ನಟ ಮಂಜುನಾಥ್ ಹೆಗ್ಡೆ ಇದೀಗ ಬೇರ ಚಿತ್ರದಲ್ಲಿ

 ಚಂದನವನದ ಪ್ರಮುಖ ನಟ ಮಂಜುನಾಥ್ ಹೆಗ್ಡೆ ಇದೀಗ ಬೇರ ಚಿತ್ರದಲ್ಲಿ

 


ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಮಂಜುನಾಥ್ ಹೆಗಡೆಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಇವರು ಚಂದನವನಕ್ಕೆ ಕಾಲಿಟ್ಟಿದ್ದು ಒಂದು ಕಾಕಾತಾಳಿ ಸರಿ.

ಚಿಕ್ಕ ವಯಸ್ಸಿನಲ್ಲೇ ಇವರು ಕಾಲೇಜಿನಲ್ಲಿ ಸಣ್ಣಪುಟ್ಟ ನಾಟಕಗಳಲ್ಲಿ ನಟಿಸುತ್ತಿದ್ದರು. ಅವರ ಖುಷಿಗಾಗಿ ಮಾಡುತ್ತಿದ್ದ ಆ ನಾಟಕ ಇಂದು ಅವರ ಜೀವನವನ್ನೇ ಬದಲಿಸಿದೆ. ಕಾಲೇಜಿನಲ್ಲಿ ಇವರ ಅಧ್ಯಾಪಕರಾದ ಎಂ.ಎನ್ ಮುರುಳಿಧರ್ ಅವರು ಇವರ ಕಲೆಯನ್ನು ಗುರುತಿಸಿ ಪಿಜಿ ಡಿಪ್ಲೋಮಾ ಇನ್ ಡ್ರಾಮಾ ಕೋರ್ಸ್ಅನ್ನು ಮಾಡಲು ಸಲಹೆಯನ್ನು ನೀಡಿದರು. ಕೆಲವು ಥಿಯೇಟರ್ ಗ್ರೂಪ್ನಲ್ಲೂ ಇವರು ಕೆಲಸವನ್ನು ಮಾಡಿದ್ದಾರೆ . ಅದಾದ ನಂತರ ಇವರು ತಮ್ಮ ಜೀವನವನ್ನು ಸಾಗಿಸಲು ಶಿವಮೊಗ್ಗದಲ್ಲಿ ಒಂದು ಪ್ರಿಂಟಿಂಗ್ ಪ್ರೆಸ್ ಅಲ್ಲಿ
ಅವರ ಕಾರ್ಯವನ್ನು ನಿರ್ವಹಿಸಿದರು.

ಡ್ರಾಮಾ ಸೆಳೆತ ತುಂಬಾ ಇರುವುದರಿಂದ ಇವರು ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ಥಿಯೇಟರ್ ಗ್ರೂಪ್ನಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗಾದ ಸ್ನೇಹಿತರು ಧಾರಾವಾಹಿಯನ್ನು ಮಾಡುತ್ತಿದ್ದಾಗ ಇವರನ್ನು ಬೊಗಳೆ ರಾಮ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಅದಾದ ಮೂಲಕ ಸಾಧನೆ ಎನ್ನುವ ಧಾರಾವಾಹಿಯಿಂದ ಎಲ್ಲರ ಮನಸ್ಸೆಳೆದರು.

ಹಲವು ಧಾರವಾಹಿಯ ನಂತರ ತಾಯಿ ಕೊಟ್ಟ ತಾಳಿ ಚಿತ್ರದಲ್ಲಿ ನಟಿಸಿದರು. 2001 ರಲ್ಲಿ ಇವರು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದರು. ಹವ್ಯಾಸವಾಗಿದ್ದ ನಟನೆ ಅಲ್ಲಿಂದ ವೃತ್ತಿಗೆ ಬದಲಾಯಿತು. ಸಡಗರ, ರಿಯಲ್ ಪೊಲೀಸ್, ಮುಗುಳುನಗೆ, ವಾಸು ನಾನ್ ಪಕ್ಕಾ ಕಮರ್ಷಿಯಲ್ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚಿನ ಧಾರವಾಹಿಯಲ್ಲಿ ನಟಿಸಿದ್ದಾರೆ.

ಜೀ ಕನ್ನಡ , ಕಲರ್ಸ್ ಕನ್ನಡ,ಚಾನಲ್ ಇವರು ಮಾಡುತ್ತಿರುವ ಪಾತ್ರಕ್ಕೆ ಹಲವಾರು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದೀಗ ಇವರು ಬೇರ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.


ಬೇರ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇವರು ಹಂಚಿಕೊಂಡಿದ್ದಾರೆ.ವಿಭಿನ್ನ ಕಥೆಯುಳ್ಳ ಈ ಸಿನಿಮಾ ನೋಡುಗರ ಮನಸೆಳೆಯುವುದು ಖಂಡಿತ ಎಂದಿದ್ದಾರೆ ಮಂಜುನಾಥ್ ಹೆಗಡೆಯವರು.

Related post

Leave a Reply

Your email address will not be published. Required fields are marked *

error: Content is protected !!