• June 13, 2024

ಸರ್ಕಾರದ ರಚನೆಗೂ ಮುನ್ನ ಕಾಂಗ್ರೆಸ್ ನಲ್ಲಿ ಶುರುವಾಯ್ತು ಸಿಎಂ ಸ್ಥಾನಕ್ಕಾಗಿ ಕಸರತ್ತು

 ಸರ್ಕಾರದ ರಚನೆಗೂ ಮುನ್ನ ಕಾಂಗ್ರೆಸ್ ನಲ್ಲಿ ಶುರುವಾಯ್ತು ಸಿಎಂ ಸ್ಥಾನಕ್ಕಾಗಿ ಕಸರತ್ತು

ರಾಜ್ಯ ವಿಧಾನಸಭಾ ಎಲೆಕ್ಷನ್ಗೆ ಮತದಾನ ಮುಗಿದು ರಿಸಲ್ಟ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಗೆ ಸಿದ್ದತೆ ನಡೆಯುತ್ತಿದ್ದು, ಆಪರೇಷನ್‌ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳವ ತಂತ್ರಗಾರಿಕೆಯನ್ನ ನಡೆಸಿದ್ದು, ಸಿಎಂ ಸ್ಥಾನಕ್ಕಾಗಿ ಹಲವು ಕಸರತ್ತು ನಡೆಯುತ್ತಿವೆ.

ಬಹುತೇಕ ಸಮೀಕ್ಷೆಯಂತೆ ಕಾಂಗ್ರೆಸ್‌ ಈ ಬಾರೀ ಬಹುಮತವನ್ನ ಗಳಿಸಲಿದೆ ಎಂದು ಕಾಂಗ್ರೆಸ್‌ ನಾಯಕರುವ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದು, ಕಾಂಗ್ರೆಸ್ನಲ್ಲಿ ಸಿಎಂ ಗಾದಿಗೆ ಏರುವ ಬಗ್ಗೆ ನಾನಾ, ನೀನಾ ಎಂಬ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕಳೆದ ಒಂದು ವರ್ಷದಿಂದ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಹಾಗೂ ಒಕ್ಕಲಿಗ ಸಮುದಾಯದ ನಾಯಕ ಡಿ ಕೆ ಶಿವಕುಮಾರ್‌ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದ್ದು, ಹತ್ತು ಹಲವು ನಾಯಕರು ಇದೀಗ ಸಿಎಂ ರೇಸ್‌ ನಲ್ಲಿದ್ದಾರೆ.

ಹತ್ತು ಹಲವು ನಾಯಕರು ಸಿಎಂ ಸ್ಥಾನದ ರೇಸ್‌ ನಲ್ಲಿದ್ದು, ಯಾರು ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಆ ಮೂಲಕ ಕೈ ಪಾಳಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!