ಕನ್ಯಾಡಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಹಿನ್ನೆಲೆ: ಹಿಂದೂ ಸಂಘಟಕರಿಂದ ಕನ್ಯಾಡಿಯಲ್ಲಿ ಹನುಮಾನ್ ಚಾಲೀಸಾ ಪಠಣ
ಕನ್ಯಾಡಿ: ಸನಾತನ ಹಿಂದೂ ಸಮಾಜದ ಮೇಲೆ , ಹಿಂದೂ ಸಮಾಜದ ಸಂಘಟನೆಗಳ ಮೇಲೆ ನಿರಂತರ ನಡೆಯುವ ದಬ್ಬಾಳಿಕೆಯ ವಿರುದ್ಧ ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಾಗೂ ಹಿಂದೂ ಸಂಘಟನೆಗಳು ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸ ಪಠಿಸುವಂತೆ ಕರೆ ನೀಡಲಾಗಿತ್ತು ಅದರಂತೆ ಇಂದು ಹಿಂದೂ ಸಂಘಟನೆಗಳು ಕನ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಲ್ಲಿ ರಾಷ್ಟ್ರ ಭಕ್ತ ಹಿಂದೂ ಸಮಾಜದ ಬಂಧು ಭಗಿನಿಯರು ಸಾಮೂಹಿಕ ಹನುಮಾನ್ ಚಾಲೀಸಾ ಪಠಿಸಿದ್ದಾರೆ.
ಈ ವೇಳೆ ಪೃಥ್ವೀಶ್ ಧರ್ಮಸ್ಥಳ ಮಾತನಾಡಿ ದೇಶ ವಿರೋಧಿ ಶಕ್ತಿಗಳು ಜನರ ನಂಬಿಕೆ ಹಾಗೂ ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಹನುಮಂತನ ಹೆಸರು ಇಟ್ಟುಕೊಂಡ ರಾಷ್ಟ್ರ ಭಕ್ತಿಯ ಜೊತೆ ಸನಾತನ ಹಿಂದೂ ಧರ್ಮದ ಒಳಿತಿಗಾಗಿ ಕೆಲಸ ಮಾಡುವ ರಾಷ್ಟ್ರ ಪ್ರೇಮಿ ಸಂಘಟನೆಯ ವಿರೋಧಿಗಳ ಕುಕೃತ್ಯದ ಬಗ್ಗೆ ಮಾತನಾಡಿದರು
ಈ ವೇಳೆ ಹಲವಾರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.