• October 13, 2024

ದಿ ಕೇರಳ ಸ್ಟೋರಿ: ಲವ್ ಜಿಹಾದ್ ನಿಂದ ಐಸಿಸ್ ವರೆಗೆ ಆನ್ ಲೈನ್ ವಿಶೇಷ ಸಂವಾದ

 ದಿ ಕೇರಳ ಸ್ಟೋರಿ: ಲವ್ ಜಿಹಾದ್ ನಿಂದ ಐಸಿಸ್ ವರೆಗೆ ಆನ್ ಲೈನ್ ವಿಶೇಷ ಸಂವಾದ

 

‘ಜನಸಂಖ್ಯಾ ಹೆಚ್ಚಳ’, ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ಇವು ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಗುರಿಗಳಾಗಿವೆ. ಎಡ ಮತ್ತು ಪಾಶ್ಚಾತ್ಯ ಮಾಧ್ಯಮಗಳು ಇದನ್ನು ಕಾಲ್ಪನಿಕ ಎಂದು ಕರೆಯುತ್ತವೆ; ಆದರೆ ‘ದಿ ಕೇರಳ ಸ್ಟೋರಿ’ಯು ಒಂದು ಕಹಿ ಸತ್ಯವಾಗಿದ್ದು ‘ಲವ್ ಜಿಹಾದ್’ ಇದು ಹಿಂದೂ-ಕ್ರೈಸ್ತ ಮಹಿಳೆಯರ ಗರ್ಭಾಶಯದ ಮೇಲಿನ ಭಯೋತ್ಪಾದಕ ದಾಳಿಯಾಗಿದೆ ಎಂದು ಕರ್ನಾಟಕದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ವಿತರಕ ಪ್ರಶಾಂತ ಸಂಬರಗಿ ಇವರು ಪ್ರತಿಪಾದಿಸಿದರು.

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದಿ ಕೇರಳ ಸ್ಟೋರಿ : ಲವ್ ಜಿಹಾದ್‌ನಿಂದ ಐಸಿಸ್ ವರೆಗೆ !’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡಿದರು.

2019 ರಲ್ಲಿ ‘ಹಲಾಲಾ’ ಪದ್ಧತಿಯ ಆಧಾರದ ಮೇಲೆ ‘ಹಲಾಲಾ ಎ ಕರ್ಸ್’ ಎಂಬ ಚಲನಚಿತ್ರವನ್ನು ಕಾಂಗ್ರೆಸ್ ವಿರೋಧಿಸಿತು; ಆದರೆ ಚಲನಚಿತ್ರ ನಿರ್ಮಾಪಕರು ‘ಹಲಾಲಾ ಪದ್ಧತಿ’ಯ ಭಯಾನಕ ಸತ್ಯವನ್ನು ನ್ಯಾಯಾಲಯದ ಮುಂದೆ ಸಿದ್ಧಪಡಿಸಿದ್ದರಿಂದ ಕಾಂಗ್ರೆಸ್‌ನ ವಿರೋಧ ವಿಫಲವಾಯಿತು. 2010 ರಲ್ಲಿಯೂ ಕೇರಳ ಉಚ್ಚ ನ್ಯಾಯಾಲಯದಲ್ಲಿ ‘ಲವ್ ಜಿಹಾದ್’ ಸತ್ಯ ಬೆಳಕಿಗೆ ಬಂದಿತ್ತು. ಇದನ್ನು ತಡೆಯಲು ಸರಕಾರ ಅಂತರ್ಧರ್ಮೀಯ ವಿವಾಹಕ್ಕೆ ನಿರ್ಬಂಧ ಹೇರಬೇಕಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲಾಗಿದೆ. ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನೆಯಲ್ಲಿ ಪಾಕಿಸ್ತಾನವು ತೊಡಗಿದೆ ಎಂದು ಹಿಂಸಾತ್ಮಕ ಘಟನೆಗಳು ತೋರಿಸುತ್ತವೆ, ಆದರೆ ಕೇರಳದಲ್ಲಿನ ಭಯೋತ್ಪಾದನೆಯು ‘ಲವ್ ಜಿಹಾದ್’ ಎಂಬ ‘ಸಾಫ್ಟ್ ಟೆರರಿಝಮ್’ನ ಭಾಗವಾಗಿದ್ದು ‘ಲವ್ ಜಿಹಾದ್’ಗಳಿಗೆ ‘ಸೌದಿ’ ಮತ್ತು ‘ಸಿರಿಯಾ’ದಂತಹ ದೇಶಗಳು ಇದರ ಹಿಂದಿವೆ ಎಂದರು.

ಈ ಸಮಯದಲ್ಲಿ ‘ಹಿಂದೂ ಜನಜಾಗೃತಿ ಸಮಿತಿ ರಣರಾಗಿಣಿ ಶಾಖೆಯ ಪ್ರತೀಕ್ಷಾ ಕೊರಗಾಂವಕರ್ ಇವರು ಮಾತನಾಡಿ, ಒಂದು ಕಡೆ ಕಾಂಗ್ರೆಸ್ ಮತ್ತು ಎಡಪಂಥಿಗಳು ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದರೆ, ಇನ್ನೊಂದು ಕಡೆ 2011 ರಲ್ಲಿ ಮಹಾರಾಷ್ಟ್ರದಲ್ಲಿ ಇದೇ ಕಾಂಗ್ರೆಸ್ ಪಕ್ಷದ ಸರಕಾರ ಇದ್ದಾಗ ಸುತ್ತೋಲೆ ಹೊರಡಿಸಿ ‘ಲವ್ ಜಿಹಾದ್’ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕೇಳಿಕೊಂಡಿದ್ದು, ‘ಲವ್ ಜಿಹಾದ್’ನ 22 ಪ್ರಕರಣಗಳ ದಾಖಲಾಗಿರುವ ಬಗ್ಗೆ ‘ಮಾಹಿತಿ ಅಧಿಕಾರ’ದ ಅಡಿಯಲ್ಲಿ ನೀಡಲಾಗಿತ್ತು. ಅಲ್ಲದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಆಗಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಇವರು 2010 ರಲ್ಲಿ ನೇರವಾಗಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ‘ಮುಂದಿನ 20 ವರ್ಷಗಳಲ್ಲಿ ಕೇರಳವನ್ನು ‘ಇಸ್ಲಾಮಿಕ್ ಸ್ಟೇಟ್’ ಮಾಡಲು ಸಂಚು ರೂಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದರು. ಇಂಗ್ಲೆಂಡ್ ನ ಗೃಹಸಚಿವರು ಇತ್ತಿಚೆಗೆ ಪಾಕಿಸ್ತಾನಿ ಮೂಲದ ಹುಡುಗರು ‘ಇಸ್ಲಾಮಿಕ್ ಗ್ರೂಮಿಂಗ್ ಗ್ಯಾಂಗ್’ ಮೂಲಕ ಇಂಗ್ಲೆಂಡ್‌ನಲ್ಲಿರುವ ಕ್ರೈಸ್ತ ಹುಡುಗಿಯರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ‘ಸ್ವೀಡನ್’ ‘ದಿ ಕೇರಳ ಸ್ಟೋರಿ’ನಂತೆ ತನ್ನ ದೇಶದಲ್ಲಿನ ಮಹಿಳೆಯರ ಮೇಲೆ ‘ಐಎಸ್‌ಐಎಸ್’ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದಕರು ನಡೆಸಿದ ಭಯಾನಕ ದೌರ್ಜನ್ಯದ ಬಗ್ಗೆ ಚಲನಚಿತ್ರ ಸರಣಿಯನ್ನು ನಿರ್ಮಿಸಿತ್ತು ಮತ್ತು ಅದರ ಬಗ್ಗೆ ಜನಜಾಗೃತಿ ಮೂಡಿಸಲು ಪ್ರೋತ್ಸಾಹಿಸಿದ್ದರು ಎಂದು ಪ್ರತೀಕ್ಷಾ ಹೇಳಿದರು.

Related post

Leave a Reply

Your email address will not be published. Required fields are marked *

error: Content is protected !!