ಬೆಳ್ತಂಗಡಿ: ಹರೀಶ್ ಪೂಂಜ ಚುನಾವಣಾ ಪ್ರಚಾರ ವೇಳೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಹಣವನ್ನು ನೀಡಿ ಬರುತ್ತಾರೆ ಮನೆಯವರು ಬೇಡ ಎಂದರೂ ಮೇಜಿನ ಮೇಲೆ ಇಟ್ಟು ಹೋಗುತ್ತಾರೆ ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪ
ಬೆಳ್ತಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮನೆ ಮನೆಗೆ ತೆರಲಿ ಚುನಾವಣಾ ಪ್ರಚಾರ ವೇಳೆ ಪ್ರತೀದಿನ ಮೂರರಿಂದ ಮೂರುವರೆ ಕೋಟಿ ರೂಪಾಯಿ ಹಣ ಹಂಚುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೋಗುವಾಗ ಪೂಂಜರ ಜೊತೆಗೆ ನಾಲ್ಕು ಕಾರುಗಳು ಹೋಗುತ್ತಿದ್ದು, ಒಂದು ಕಾರಲ್ಲಿ ದೊಡ್ಡ ಮೊತ್ತದ ಹಣವನ್ನು ರವಾನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಏ.26 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹರೀಶ್ ಪೂಂಜ ಚುನಾವಣಾ ಪ್ರಚಾರ ವೇಳೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಹಣವನ್ನು ನೀಡಿ ಬರುತ್ತಾರೆ ಮನೆಯವರು ಬೇಡ ಎಂದರೂ ಮೇಜಿನ ಮೇಲೆ ಇಟ್ಟು ಹೋಗುತ್ತಾರೆ ಕಾರ್ಯಕರ್ತರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗೆ ಹೋಗಿ ದೇವರ ಫೋಟೋ ಮುಟ್ಟಿಸಿ ಪ್ರತೀ ಮತ ಒಂದಕ್ಕೆ ಒಂದು, ಎರಡು ಸಾವಿರ ನೀಡಿ ಪ್ರಮಾಣ ಮಾಡುತ್ತಾರೆ ಪೂಂಜರು ನೀಡುವ ಈ ಎಲ್ಲಾ ಹಣ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿಗಳ 40% ಕಮಿಷನ್ ಆಗಿರುತ್ತದೆ . ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಹೊರಗಿನವರೆಂದು ಅಪಪ್ರಚಾರ ಮಾಡುತ್ತಾರೆ ಆದರೆ ಅವರು ಬೆಳ್ತಂಗಡಿ ಯಲ್ಲೇ ಹುಟ್ಟಿದವರು ಎಂದರು.
ಇದೇ ವೇಳೆ ಕಾಂಗ್ರೆಸ್ ವಕ್ತಾರ ಮನೋಹರ್ ಕುಮಾರ್ ಮಾತನಾಡಿ ತಾಲೂಕಿನ ಅಕ್ರಮ ಮರಳುಗಾರಿಕೆ ಬಗ್ಗೆ ಮಾಜಿ ಶಾಸಕರು ವಸಂತ ಬಂಗೇರರು ಇಲಾಖೆಗೆ ತಾಲೂಕಿನ ಅಕ್ರಮ ಮರಳುಗಾರಿಕೆಯ ತನಿಖೆಗೆ ಮನವಿ ಮಾಡಿದ್ದರೂ ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ತಾಲೂಕಿನ ಗುತ್ತಿಗೆದಾರರಿಗೆ ಯಾವುದೇ ಗುತ್ತಿಗೆಯನ್ನು ನೀಡುತ್ತಿಲ್ಲ ಇದರಲ್ಲಿ ಶಾಸಕರ ಕೈವಾಡ ವಿದೆ ಎಂದು ಆರೊಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಉಸ್ತುವಾರಿ ಕೇರಳ ಶಾಸಕ ಜೋಸೆಫ್ , ಮುಖಂಡರಾದ ವಕೀಲ ಸಂತೋಷ್ ಲಾಯಿಲ, ಲೋಕೇಶ್ ಗೌಡ ಕೊಯ್ಯೂರು, ಚುನಾವಣಾ ಉಸ್ತುವಾರಿ ಸತೀಶ್ ಕಾಶಿಪಟ್ಣ, ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಬಿ.ಕೆ ವಸಂತ ಉಪಸ್ಥಿತರಿದ್ದರು.