• November 22, 2024

ಧರ್ಮಸ್ಥಳ: ಶ್ರೀ ಧ.ಮಂ.ಆ.ಮಾ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಒಂದು ದಿನದ ಬೇಸಿಗೆ ಶಿಬಿರ

 ಧರ್ಮಸ್ಥಳ:   ಶ್ರೀ ಧ.ಮಂ.ಆ.ಮಾ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಒಂದು ದಿನದ ಬೇಸಿಗೆ ಶಿಬಿರ

 

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಒಂದು ದಿನದ ಬೇಸಿಗೆ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲಾ ಸಹ ಶಿಕ್ಷಕಿ ಶ್ರೀಮತಿ ಆಶಾ ಆಗಮಿಸಿದ್ದರು. ದೀಪ ಪ್ರಜ್ವಾಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತದನಂತರ ಮಾತಾಡಿದ ಅವರು ವಿದ್ಯಾರ್ಥಿ ಜೀವನವು ವ್ಯಕ್ತಿಯ ಜೀವನದ ಅತ್ಯಂತ ಅವಸ್ಮರಣೀಯ ಹಂತಗಳಲ್ಲಿ ಒಂದಾಗಿದೆ. ಇದು ಜೀವನಕ್ಕೆ ಅಡಿಪಾಯವನ್ನು ನಿರ್ಮಿಸುತ್ತದೆ. ವಿದ್ಯಾರ್ಥಿ ಜೀವನ ಕೇವಲ ಪುಸ್ತಕಗಳಿಂದ ಮಾತ್ರ ಕಲಿಯುವುದಲ್ಲ ಇಂತಹ ಅನೇಕ ಶಿಬಿರಗಳಿಂದ ಕರಿಯುವಂತದ್ದು ತುಂಬಾನೇ ಇದೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯ ಅದನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಿ ಕೊಡುತ್ತದೆ. ಅಡಿಪಾಯ ಗಟ್ಟಿಯಾಗಿದ್ದರೆ ಕಟ್ಟಡವು ಭದ್ರ. ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ. ಅನುಭವ ಎನ್ನುವುದು ಎಲ್ಲೂ ಹೆಕ್ಕಲು ಸಿಗುವುದಿಲ್ಲ ಅದನ್ನು ಅನುಭವಿಸಬೇಕು. ಜ್ಞಾನ ನಮ್ಮ ಕಳೆದು ಹೋದ ಸ್ವತ್ತು ಅದನ್ನು ಎಲ್ಲೇ ಸಿಕ್ಕರು ಹಾಕಿಕೊಳ್ಳಿ ನಿಮ್ಮ ಮನದ ಕಿಟಕಿ ಬಾಗಿಲುಗಳನ್ನು ತಿಳಿದುಕೊಳ್ಳಿ ಜ್ಞಾನದ ಅನುಭವದ ಗಾಳಿ ಬೀಸಲು ಬಿಡಿ ಎಂದು ಶುಭ ಹಾರೈಸಿದರು.

ತದನಂತರ ಮಾತನಾಡಿದ ಹಿರಿಯ ಸಹ ಶಿಕ್ಷಕಿ ಶ್ರೀಮತಿ ರಮಾರಾಜೇಶ್ ದಯೆ ಸಹನೆ ಅನುಕಂಪಗಳು ನಿಮಗೆ ದಾರಿದೀಪವಾಗಲಿ. ಜೀವನದಲ್ಲಿ ಸ್ವಂತಿಕೆ ಎಂಬುದು ಇರಲಿ. ಸದಾ ಕ್ರಿಯಾಶೀಲರಾಗಿದ್ದುಕೊಂಡು ತಮ್ಮತನವನ್ನು ಬಿಟ್ಟು ಕೊಡದೆ ಮಾನವೀಯ ಸಂಬಂಧಗಳನ್ನು ಭದ್ರಗೊಳಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮವನ್ನು ಕುಮಾರಿ ಧನ್ಯ ಸ್ವಾಗತಿಸಿ ನೆರವೇರಿಸಿದರು.

ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪರಿಮಳ ಎಂ ವಿ ಇವರ ನಾಯಕತ್ವದಲ್ಲಿ, ಶ್ರೀಮತಿ ಗೀತಾ ಹಾಗೂ ಶ್ರೀಮತಿ ಶಶಿಕಲಾ ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾಗಿದ್ದರು. ಈ ಶಿಬಿರದಲ್ಲಿ ಸ್ಕೌಟ್ ಹಾಗೂ ಗೈಡ್ ನ ವಿವಿಧ ಚಟುವಟಿಕೆಗಳು ಶಾಲಾ ಚಿತ್ರಕಲಾ ಶಿಕ್ಷಕಿ ಕುಮಾರಿ ಶ್ವೇತಾ ಇವರ ನಾಯಕತ್ವದಲ್ಲಿ ವಿವಿಧ ಕ್ರಾಫ್ಟ್ ಕೆಲಸಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Related post

Leave a Reply

Your email address will not be published. Required fields are marked *

error: Content is protected !!