• November 4, 2024

ಮೈರೋಳ್ತಡ್ಕ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ.

 ಮೈರೋಳ್ತಡ್ಕ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ.

 

ಮೈರೋಳ್ತಡ್ಕ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ವತಿಯಿಂದ ಬಂದಾರು ಗ್ರಾಮದ ಮೈರೋಳ್ತಡ್ಕ ಒಕ್ಕೂಟದಲ್ಲಿ ಆರಂಭಗೊಂಡ ಶಾಂಭವಿ ಜ್ಞಾನ ವಿಕಾಸ ಕೇಂದ್ರವು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನ ದಲ್ಲಿ ಕಳೆದ 23ವರ್ಷಗಳಿಂದ ನಡೆದು ಬಂದಿದ್ದು , ಕೇಂದ್ರದ ಸದಸ್ಯರು ಮಹಿಳಾ ಸಬಲೀಕರಣ, ಕೌಟುಂಬಿಕ ಸಾಮರಸ್ಯ, ವೈಯುಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ, ಆರ್ಥಿಕ ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಮುಂತಾದ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ರೀತಿಯ ಅಭಿವೃದ್ಧಿ ಹೊಂದಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ವತಿಯಿಂದ ಈ ಕೇಂದ್ರಗಳಿಗೆ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ ಎಂದು ಗುರುತಿಸಿ ಅಭಿನಂದನಾ ಪ್ರಮಾಣ ಪತ್ರ ವನ್ನು ನೀಡಲಾಯಿತು.

ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.
ಸಂಯೋಜಕಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಶ್ರೀಮತಿ ಗಿರಿಜಾ ಧನ್ಯವಾದವಿತ್ತರು.

Related post

Leave a Reply

Your email address will not be published. Required fields are marked *

error: Content is protected !!