• October 18, 2024

ನಾವೂರು: ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಕ್ಕೆ ಮತ್ತು ಮಹಿಳೆಯರಿಗೆ ಅವಮಾನ ಆರೋಪ: ಎಸ್ ಡಿ ಪಿಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

 ನಾವೂರು: ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಕ್ಕೆ ಮತ್ತು ಮಹಿಳೆಯರಿಗೆ ಅವಮಾನ ಆರೋಪ: ಎಸ್ ಡಿ ಪಿಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

 

ನಾವೂರು: ನಾವೂರು ಗ್ರಾಮದಲ್ಲಿ ನಡೆದ ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಕ್ಕೆ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಕಾರ್ಯಕ್ರಮದ ಆಯೋಜಕರ ಹಾಗೂ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಸ್ ಡಿಪಿಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಎ.6 ರಂದು ನಾವೂರಿನಲ್ಲಿ ನಡೆದ ಪುರುಷ ಕಟ್ಟುವುದು ಕಾರ್ಯಕ್ರಮದಲ್ಲಿ ಯುವಕರು ಬುರ್ಖಾ ಹಾಗೂ ಟೊಪ್ಪಿ ಹಾಕಿಕೊಂಡು ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಈ ವಿರುದ್ದ ಕ್ರಮ ಕೈಗೊಳ್ಳುವಂತೆ ಎಸ್ ಡಿ ಪಿ ಐ ತಾಲೂಕು ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಕಾರ್ಯದರ್ಶಿ ಫಝಲ್ ಉಜಿರೆ, ಸಾದಿಕ್ ಲಾಯಿಲ, ಶಮೀಮ್ ಯೂಸುಫ್ ,ಹುಸೈನ್ ಪಡಂಗಡಿ ಹಾಗೂ ಇತರರು ದೂರು ನೀಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!