ಬೆಳ್ತಂಗಡಿ: ಮನೆಗೆ ಬಿದ್ದ ತೆಂಗಿನ ಮರ: ಅದೃಷ್ಟವಶಾತ್ ಪಾರಾದ ಮನೆಮಂದಿ

ಬದ್ಯಾರು: ಬಿರುಸಾದ ಗಾಳಿಗೆ ತೆಂಗಿನಮರವೊಂದು ಮನೆಗೆ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬದ್ಯಾರು ಗ್ರಾಮದ ಕಲೆಂಜಿಂರೋಡಿ ಎಂಬಲ್ಲಿ ನಡೆದಿದೆ.
ತೆಂಕಿನ ಮರ ಬಿದ್ದ ರಭಸಕ್ಕೆ ಮನೆಯ ಹೆಂಚು ಪುಡಿಪುಡಿಯಾಗಿದ್ದು ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.