• June 15, 2024

ಬೆಳ್ತಂಗಡಿ: ಚುನಾವಣಾ ಪೂರ್ವತಯಾರಿ ಹಿನ್ನೆಲೆ: ಚುನಾವಣಾಧಿಕಾರಿಗಳಿಂದ ಸುದ್ದಿಗೋಷ್ಠಿ

 ಬೆಳ್ತಂಗಡಿ: ಚುನಾವಣಾ ಪೂರ್ವತಯಾರಿ ಹಿನ್ನೆಲೆ: ಚುನಾವಣಾಧಿಕಾರಿಗಳಿಂದ ಸುದ್ದಿಗೋಷ್ಠಿ

ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಯಲ್ಲಿ ಚುನಾವಣಾಧಿಕಾರಿಗಳು ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಯಿತು.

ಈ ವೇಳೆ ಮಾತನಾಡಿದ ಚುನಾವಣಾಧಿಕಾರಿ ಯೋಗೀಶ್ ಒಟ್ಟು 241 ಮತದಾನ ಕೇಂದ್ರಗಳು, ಒಟ್ಟು 143 ಮತಗಟ್ಟೆ ಸ್ಥಳಗಳಿದ್ದು, ಒಟ್ಟು ಮತದಾರರು 222144 ಮಂದಿ ಇದ್ದು ಅದರಲ್ಲಿ ಗಂಡು 110634, ಹೆಣ್ಣು 111510 ಮಂದಿ ಇದ್ದು, ಒಟ್ಟು 241 ಬಿ.ಎಲ್.ಓಗಳು, 3 ವೀಡಿಯೋ ಚಿತ್ರೀಕರಣ ಸಿಬ್ಬಂದಿ, 3 ವೀಡಿಯೋ ಕಣ್ಗಾವಲು ಸಿಬ್ಬಂದಿ, ಕೊಕ್ಕಡ, ಚಾರ್ಮಾಡಿ, ನಾರಾವಿಯಲ್ಲಿ 3 ಚೆಕ್ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಎರಡು ಶಿಫ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚುನಾವಣಾಧಿಕಾರಿ ಯೋಗೀಶ್, ಉಪಚುನಾವಣಾಧಿಕಾರಿ ಸುರೇಶ್ ಕುಮಾರ್, ಎಮ್ ಸಿ ಸಿ ಅಧಿಕಾರಿ ಕುಸುಮಾಧರ್, ಸೆಕ್ಟರ್ ಅಧಿಕಾರಿ ನಟರಾಜ್, ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!