ಪವಾಡ ಮೆರೆದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ:ಜಲ ಸಮಸ್ಯೆಯಿಂದ ನೊಂದ ಭಕ್ತೆಗೆ ಶ್ರೀ ರಕ್ಷೆಯಾದ ಅಭಯನುಡಿ: ಇಳೆಯನ್ನೇ ತಂಪು ಮಾಡಿದ ಶ್ರೀ ದೇವಿ
ಪುತ್ತೂರು: ಪವಾಡವನ್ನೇ ಸೃಷ್ಠಿಮಾಡುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಮಹಿಮೆ ಅತ್ಯದ್ಭುತವಾದುದು.
ಅದಕ್ಕೆ ಸಾಕ್ಷಿ ಎಂಬಂತೆ ಪುತ್ತೂರು ತಾಲೂಕಿನ ಕೊಲ್ತಿಗೆ ಗ್ರಾಮದ ಪೆರ್ಲಂಪಾಡಿ ಪಾದೆ ಮನೆಯ ಶ್ರೀಮತಿ ರೂಪ ಲತಾ ಎಂಬುವವರ ಭೂಮಿಯಲ್ಲಿ ಜಲದ ಸಮಸ್ಯೆಯನ್ನು ಹೋಗಲಾಡಿಸಿ ಚಾಮುಂಡೇಶ್ವರಿ ತಾಯಿಯು ಪವಾಡ ಮೆರೆದಿದ್ದಾಳೆ.
ಇವರ ಭೂಮಿಯಲ್ಲಿ ಜಲದ ಸಮಸ್ಯೆ ಎದುರಾದಾಗ ಹಲವಾರು ಪ್ರಯತ್ನಗಳಿಂದ ಸೋತುಹೋದಾಗ ಕೊನೆಗೆ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿಯ ಅಭಯ ನುಡಿಯಲ್ಲಿ ವಿಚಾರಿಸಿದ್ದಾರೆ.
ಭೂಮಿಯಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿ ತನ್ನ ಕಷ್ಟವನ್ನು ಪರಿಹರಿಸುವಂತೆ ಮಾತು ನೀಡುತ್ತಾಳೆ ಅದರಂತೆ ಜಲದ ಸಮಸ್ಯೆಯು ನಿವಾರಣೆಯಾಯಿತು.
ಕಷ್ಟವೆಂದು ಭಕ್ತರ ಪಾಲಿಗೆ ವರದಾನವಾಗಿ ಭಕ್ತರನ್ನು ಪೊರೆಯುವ ಶ್ರೀ ಚಾಮುಂಡೇಶ್ವರಿ ತಾಯಿಯ ಪವಾಡ ಮತ್ತೆ ಮತ್ತೆ ಕಣ್ಣೆದುರು ಬರುತ್ತಿರುವುದು ಶ್ಲಾಘನೀಯ