• October 25, 2024

ಚಾರ್ಮಾಡಿ: ಚುನಾವಣಾ ಪೂರ್ವ ತಯಾರಿ ಹಿನ್ನೆಲೆ: ಚಾರ್ಮಾಡಿ ಚೆಕ್ ಪೋಸ್ಟ್ ಗೆ ದ.ಕ ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆ ಪರಿಶೀಲನೆ

 ಚಾರ್ಮಾಡಿ: ಚುನಾವಣಾ ಪೂರ್ವ ತಯಾರಿ ಹಿನ್ನೆಲೆ: ಚಾರ್ಮಾಡಿ ಚೆಕ್ ಪೋಸ್ಟ್ ಗೆ ದ.ಕ ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆ ಪರಿಶೀಲನೆ

 

ಚಾರ್ಮಾಡಿ: ಚುನಾವಣಾ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಜಿಲ್ಲಾ ಗಡಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಚಾರ್ಮಾಡಿ ಚೆಕ್ ಪೋಸ್ಟ್ ಗೆ ದ.ಕ ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆ ಬೆಳ್ತಂಗಡಿ ಗೆ ಆಗಮಿಸಿ ಚೆಕ್ ಪೋಸ್ಟ್ ಗಳನ್ನು ಪರಿಶೀಲನೆ ನಡೆಸಿ ಪೊಲೀಸರ ಜೊತೆ ಸಭೆ ನಡೆಸಿದರು.

ಚಾರ್ಮಾಡಿ ಗ್ರಾಮ.ಪಂಚಾಯತ್, ಚಾರ್ಮಾಡಿ ಚೆಕ್ ಪೋಸ್ಟ್, ಕೊಕ್ಕಡ ಚೆಕ್ ಪೋಸ್ಟ್ ಭೇಟಿ ನೀಡಿ ಗಾಂಜಾ ಬೆಳೆ ಮಾರಾಟ ಸೇವನೆ ಕಂಡು ಬಂದರೆ ಅಂತವರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಚೆಕ್ ಪೋಸ್ಟ್ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಜೊತೆಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!