• October 25, 2024

ಬೆಳ್ತಂಗಡಿ: ಹಿಂದೂ ರಾಷ್ಟ್ರ ಜಾಗೃತಿ ಸಭೆ

 ಬೆಳ್ತಂಗಡಿ: ಹಿಂದೂ ರಾಷ್ಟ್ರ ಜಾಗೃತಿ ಸಭೆ

 

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ರಾಮನಗರ ಬುಳೇರಿ ಮೊಗ್ರು, ಮುರ ಶ್ರೀ ರಾಮ ಭಜನಾ ಮಂದಿರದ ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಮಾ.19 ರಂದು ಆಯೋಜನೆ ಮಾಡಲಾಗಿತ್ತು.

ಸಭೆಯ ಪ್ರಾರಂಭವನ್ನು ಶಂಖನಾದದೊಂದಿಗೆ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ದೀಪಪ್ರಜ್ವಲನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಸಭೆಯ ಪ್ರಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ನವಿನಾ ಮತ್ತು ಪಾರ್ವತಿ ಇವರು ಸಭೆಯ ನಿರೂಪಣೆ ಮಾಡಿದರು.

ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ, ಬಂಧುತ್ವ ಮತ್ತು ನ್ಯಾಯ ಸಿಗುವುದೆಂದು ಹೇಳಲಾಗಿದೆ.ಆದರೆ ಈ ದೇಶದಲ್ಲಿ ಯಾವಾಗಲೂ ಹಿಂದೂಗಳ ಮೇಲೆ ಭೇದಭಾವ ಮಾಡಲಾಗುತ್ತಿದೆ. ಸರಕಾರದಿಂದ ಅನುದಾನ ಪಡೆಯುವ ಮದರಸಗಳಲ್ಲಿ, ಕಾನ್ವೆಂಟ್ಗಳಲ್ಲಿ ಅವರ ಧರ್ಮದ ಬಗ್ಗೆ ಕಲಿಸಬಹುದು ಆದರೆ ಹಿಂದೂ ಧರ್ಮದ ಬಗ್ಗೆ , ಸಂಸ್ಕೃತಿಯ ಬಗ್ಗೆ ಕಲಿಸಲು ನಿರ್ಬಂಧ ಇರುತ್ತದೆ. ಭಾರತೀಯ ಸಂವಿಧಾನದಲ್ಲಿ ನಾಗರಿಕರಿಗೆ ಸುರಕ್ಷತೆಯ ಬಗ್ಗೆ ಆಶ್ವಾಸನೆ ನೀಡಿದ್ದರೂ 32
ವರ್ಷಗಳಿಂದ ಕಾಶ್ಮೀರಿ ಹಿಂದೂಗಳಿಗೆ ಅವರ ಮಾತೃಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಕಲಂ 370 ರದ್ದಾಯಿತು; ಆದರೆ ಕಾಶ್ಮೀರ ಇಂದಿಗೂ ಭಯೋತ್ಪಾದಕತೆಯಿಂದ ಮುಕ್ತವಾಗಿಲ್ಲ. ಪುನಃ ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡವು ಪ್ರಾರಂಭವಾಗಿದೆ.ಭಾರತದಲ್ಲಿ ಹಿಂದೂಗಳಿಗೆ ‘ಬಹುಸಂಖ್ಯಾತ ಆಯೋಗ’ ಏಕಿಲ್ಲ?.

ಧರ್ಮಾಚರಣೆಯಿಂದ ಆತ್ಮಬಲ ನಿರ್ಮಾಣವಾಗುತ್ತದೆ. ಧರ್ಮದ ಎಲ್ಲಾ ಮಂತ್ರ ರಾಷ್ಟ್ರ ಕಲ್ಯಾಣ ಮತ್ತು ವಿಶ್ವಕಲ್ಯಾಣವಾಗಿದೆ. ಹಿಂದೂಗಳೇ ಹಿಂದೂ ಧರ್ಮವನ್ನು ಅರಿಯಿರಿ, ಧರ್ಮದಲ್ಲಿ ಜೀವಿಸಿರಿ, ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಹಭಾಗಿಯಾಗಿರಿ ಎಂದು ಚಂದ್ರ ಮೊಗೇರ್, ಸಮನ್ವಯಕರು ಹಿಂದೂ ಜನಜಾಗೃತಿ ಸಮಿತಿ. ದಕ್ಷಿಣ ಕರ್ನಾಟಕ ಇವರು ಕರೆ ನೀಡಿದರು.

ನಮ್ಮ ದೇಶವನ್ನು ಮಾತೆಯ ರೂಪದಲ್ಲಿ ಮತ್ತು ಮಾತೃ ಸಂಸ್ಕೃತಿಯನ್ನು ಪೂಜನೀಯ ಸ್ಥಾನದಲ್ಲಿ ಪೂಜಿಸುವ ಮತ್ತು ಆರಾಧಿಸುವ ಶ್ರೇಷ್ಠ ಹಿಂದೂ ಧರ್ಮ. ಇಂದು ದೇಶದ ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಬಲಿಮಾಡಲಾಗುತ್ತಿದೆ. ಮನೆಯಲ್ಲಿ ಹೆತ್ತವರಿಗೆ ಧಾರಾವಾಹಿ ನೋಡಲು ಮತ್ತು ಅದರ ಬಗ್ಗೆ ಇತರರಲ್ಲಿ ಚರ್ಚೆ ಮಾಡಲು ಸಮಯ ಇರುತ್ತದೆ ಆದರೆ ತನ್ನ ಹದಿಹರೆಯದ ಮಗಳ ಚಲನವಲನಗಳನ್ನು ಗಮನಿಸಲು ಅವಳ ಬಗ್ಗೆ ಕಾಳಜಿ ವಹಿಸಲು ಸಮಯ ಇರುವುದಿಲ್ಲ, ಈ ಬಗ್ಗೆ ಹೆತ್ತವರಲ್ಲಿ ಮತ್ತು ಲವ ಜಿಹಾದ್ ಬಗ್ಗೆ ಯುವತಿಯಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ. ಈ ಮೂಲಕ ಮಾತೃ ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿದೆ ಎಂದು ಗಣರಾಜ ಭಟ್ ಕೆದಿಲ, ಹಿಂದೂ ಜಾಗರಣ ವೇದಿಕೆ, ಕರ್ನಾಟಕ ದಕ್ಷಿಣ ಪ್ರಾಂತ್ಯ ಮಾತೃಸುರಕ್ಷಾ ಪ್ರಮುಖ್ ಕರೆ ನೀಡಿದರು.

ಸಭೆಯಲ್ಲಿ ಹರೀಶ್ ಪೂಂಜ, ಮಾನ್ಯ ಶಾಸಕರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಇವರು ಉಪಸ್ಥಿತರಿದ್ದರು.

ಸಭೆಯಲ್ಲಿ ಧರ್ಮಪ್ರೇಮಿಗಳಾದ ಜಯಪ್ರಸಾದ್ ಕಡಮ್ಮಾಜೆ, ಜಯಂತ್ ಕೊಟ್ಯಾನ್- ಬಿ.ಜೆ.ಪಿ ಮಂಡಲ ಅಧ್ಯಕ್ಷರು, ಸತ್ಯಶಂಕರ್ ಭಟ್ ಸರಳಿ – ನಿವೃತ್ತ ಶಿಕ್ಷಕರು, ಸುಬ್ರಹ್ಮಣ್ಯ ಕುಮಾರ್ ಅಗರ್ತ- ನ್ಯಾಯವಾದಿಗಳು, ಮತ್ತು ವಿಶ್ವಹಿಂದೂ ಪರಿಷತ್ ಇದರ ಮುಖಂಡರು,.ಜಗದೀಶ್ ಶೆಟ್ಟಿ ಕರಾಯ- ಕೃಷ್ಣ ಭಜನಾ ಮಂದಿರ ಅಧ್ಯಕ್ಷರು, .ರಾಜಶೇಖರ್ ರೈ- ವಿಶ್ವಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡ ಕಾರ್ಯದರ್ಶಿ ಮತ್ತು ಇತರ ಗಣ್ಯರು ಹಾಗೂ ನೂರಾರು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!