ಮಾ.13-17: ಶ್ರೀ ಒಡ್ಯೇಶ್ವರ ದೇವರ ವಾರ್ಷಿಕ ಉತ್ಸವ ಹಾಗೂ ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಪರಿವಾರ ದೈವಗಳ ನೇಮೋತ್ಸವ
ಚಿಬಿದ್ರಿ: ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಇವರ ನೇತೃತ್ವದಲ್ಲಿ ಚಿಬಿದ್ರಿ ಗ್ರಾಮದ ಪೆರಿಯಡ್ಕ ಮಾಕಳ ಶ್ರೀ ಒಡ್ಯೇಶ್ವರ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಶ್ರೀ ಒಡ್ಯೇಶ್ವರ ದೇವರ ವಾರ್ಷಿಕ ಉತ್ಸವ ಹಾಗೂ ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಪರಿವಾರ ದೈವಗಳ ನೇಮೋತ್ಸವವು ಮಾ.13 ರಿಂದ 17ರವರೆಗೆ ಜರುಗಲಿದೆ.
ಮಾ.13 ರಂದು ಬೆಳಗ್ಗೆ ಗಣಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಪಲ್ಲಪೂಜೆ,ಭಂಡಾರ ಹೊರಟು ಶ್ರೀ ಒಡ್ಯೇಶ್ವರ ಉಳ್ಳಾಲ್ತಿ ಅಮ್ಮನವರ ಉತ್ಸವ ಜರುಗಲಿದೆ.
ಮಾ.14 ರಂದು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಉಳ್ಳಾಲ್ತಿ , ಪಿಲಿಚಾಮುಂಡಿ ಗುಳಿಗ, ಕಲ್ಲುರ್ಟಿ, ಪಂಜುರ್ಲಿ, ಕೊರಗ ದೈವಗಳಿಗೆ ನೇಮೋತ್ಸವ ಹಾಗೂ ಮಾ.16 ರಂದು ಕಲ್ಕುಡ ದೈವಗಳ ನೇಮೋತ್ಸವ ಮತ್ತು ಮಾ.17 ರಂದು ಶನಿಗುಳಿಗ ದೈವದ ನೇಮೋತ್ಸವ ನಡೆಯಲಿದೆ.