ಮಾರ್ಚ್ 12:ಹಿಂದೂ ರಾಷ್ಟ್ರ ಜಾಗೃತಿ ಸಭೆ: ವೇದವ್ಯಾಸ ಕಾಮತ್ ರವರಿಗೆ ಆಮಂತ್ರಣ ಪತ್ರಿಕೆ ನೀಡಿದ ಹಿಂದೂ ಜನಜಾಗೃತಿ ಸಮಿತಿ


ಮಂಗಳೂರು : ಇದೇ ಬರುವ ಮಾರ್ಚ್ 12ರಂದು ಕದ್ರಿ ಮೈದಾನದಲ್ಲಿ ನಡೆಯಲಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಯ ನಿಮಿತ್ತ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕರಾಗಿರುವ ಶ್ರೀ ವೇದವ್ಯಾಸ ಕಾಮತ್ ಇವರನ್ನು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭೇಟಿಯಾಗಿ ಸಭೆಯ ಆಮಂತ್ರಣವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರರವರು ಸಭೆಯ ಮಹತ್ವವನ್ನು ತಿಳಿಸಿ ಹೇಳಿದರು. ದೇಶಾದ್ಯಂತ ಇದುವರೆಗೆ ಎರಡು ಸಾವಿರಕ್ಕಿಂತಲೂ ಹೆಚ್ಚಿನ ಕಡೆಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಇಂದು ಧಾರ್ಮಿಕ ದೃಷ್ಟಿಯಲ್ಲಿ ಹಿಂದೂ ಸಮಾಜವು ಜಾಗೃತವಾಗಿಲ್ಲ. ಎಲ್ಲಿಯವರೆಗೆ ರಾಷ್ಟ್ರ ಮತ್ತು ಧರ್ಮದ ಹಾನಿಯ ಬಗ್ಗೆ ಹಿಂದೂ ಸಮಾಜವು ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ಸಮಾಜ ದೌರ್ಜನ್ಯವನ್ನು ಅನುಭವಿಸಬೇಕಾಗುತ್ತದೆ. ಹಿಂದೂ ರಾಷ್ಟ್ರದ ಅವಶ್ಯಕತೆಯನ್ನು ಹಿಂದೂ ಸಮಾಜಕ್ಕೆ ತಿಳಿಸಲು ಈ ಸಭೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಿತಿ ಸಮನ್ವಯಕರಾದ ಪವಿತ್ರ ಕುಡ್ವ, ಬೆಂಗಳೂರು ಜಿಲ್ಲಾ ರಣರಾಗಿಣಿ ಶಾಖೆ ಸಮನ್ವಯಕಿ ಸೌ. ಭವ್ಯ ಗೌಡ, ಸಮಿತಿಯ ಉಪೇಂದ್ರ ಆಚಾರ್ಯ, ಮಂಜುನಾಥ ಮೈಸೂರು, ಉದ್ಯಮಿಗಳಾದ ಅನಂತ ಕಾಮತ, ಮಧುಸೂದನ್ ಐಯ್ಯರ್, ಪ್ರಶಾಂತ್ ಕಾಂಚನ್, ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಗಿರೀಶ್ ಕೊಟ್ಟಾರಿ, ಬಾಲಗಂಗಾಧರ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು.