ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ
ಬೆಳಾಲು: ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೊಕ್ಕಡ ರೈತ ಸಂಪರ್ಕ ಕೇಂದ್ರದ ಆತ್ಮ ಯೋಜನೆಯ ವತಿಯಿಂದ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ “ಗೊಂಚಲು ಸ್ತ್ರೀ ಶಕ್ತಿ ಒಕ್ಕೂಟ, ಬೆಳಾಲು” ಹಾಗೂ “ಶ್ರೀ ಅನಂತಪದ್ಮನಾಭ ಮಹಿಳಾ ಸಮಿತಿ, ಅನಂತೋಡಿ, ಬೆಳಾಲು” ಇವರ ಸಹಯೋಗದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಫೆ.17 ರಂದು ನಡೆಯಿತು.
ತರಬೇತುದಾರರಾಗಿದ್ದ ಸುಲೈಮಾನ್ ಬೆಳಾಲುರವರು ಅಣಬೆ ಕೃಷಿಯ ಬಗ್ಗೆ ವಿವರವಾದ ಮಾಹಿತಿ ನೀಡಿ ಪ್ರಾಯೋಗಿಕವಾಗಿ ಅಣಬೆ ಬ್ಯಾಗ್ ಮಾಡಿ ಮಾಹಿತಿ ತಿಳಿಸಿದರು.
ಕೃಷಿ ಇಲಾಖೆ ಕೊಕ್ಕಡ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕಿ ಚಂದ್ರಕಲಾ, ಗೊಂಚಲು ಸ್ತ್ರೀ ಶಕ್ತಿ ಒಕ್ಕೂಟ ಬೆಳಾಲಿನ ಅಧ್ಯಕ್ಷರಾದ ನಿಶಾ ಬನಂದೂರು ಹಾಗೂ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಹಿಳಾ ಸಮಿತಿಯ ಗೌರವಾಧ್ಯಕ್ಷರು, ಬೆಳಾಲು ಗ್ರಾ. ಪಂ. ಸದಸ್ಯರಾದ ವಿದ್ಯಾ ಶ್ರೀನಿವಾಸ್ ಹಾಗೂ ಬೆಳಾಲು ಗ್ರಾಮ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಹಾಗೂ ಊರಿನ ರೈತ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಲೀಲಾ ಸ್ವಾಗತಿಸಿದರು. ವಿದ್ಯಾ ಉಚಿತ ಅಣಬೆ ತರಬೇತಿ ಕಾರ್ಯಕ್ರಮದ ಅಗತ್ಯ ಮತ್ತು ಅದರಿಂದ ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಲೋಕಮ್ಮ ರವರು ಧನ್ಯವಾದವಿತ್ತರು.