ಧರ್ಮಸ್ಥಳ ಸರಕಾರಿ ಶಾಲೆಯ ವಿದ್ಯಾರ್ಥಿನಿಯಿಂದ ಸಾಧನೆಗಳ ಗರಿ
ಉಜಿರೆ : ಸರಕಾರಿ ಶಾಲೆಯ ಮಕ್ಕಳು ಯಾವುದ್ರಲ್ಲೂ ಕಡಿಮೆ ಇಲ್ಲ ಎನ್ನುವುದಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯ ದ ನಿವಾಸಿಯಾದ ಶೌರ್ಯ.ಎಸ್.ವಿ ಇಂದು ಮಾದರಿಯಾಗಿದ್ದಾಳೆ.
ಕೇವಲ 12 ವರುಷದ ಬಾಲಕಿ ಸ.ಹಿ.ಪ್ರಾ.ಶಾಲೆ ಕನ್ಯಾಡಿ 2 ಇಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದು ಈಕೆ ಮಹಾತ್ಮ ಗಾಂಧೀಜಿ ರಸಪ್ರಶ್ನೆಯಲ್ಲಿ ಭಾಗವಹಿಸಿ 87% ಅಂಕ ಗಳಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು 25 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಪಡೆದಿರುವುದು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿದ್ದು. ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಈ ಮೂರು ವೇದಿಕೆಗೆ ಆಯ್ಕೆಯಾಗಿದ್ದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಂತಹ ದೊಡ್ಡ ವೇದಿಕೆಗೆ ಆಯ್ಕೆಯಾಗಿ ಹೆತ್ತವರಿಗೆ, ಊರಿನವರಿಗೆ, ಶಾಲೆಗೆ, ಗುರುಗಳಿಗೆ ಕೀರ್ತಿ ತಂದಿದ್ದಾರೆ.