ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಇದರ ಬೆಂಗಳೂರು ಚಲೋ ಪ್ರತಿಭಟನಾ ಸಭೆ


ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಇದರ ವತಿಯಿಂದ ರಾಜ್ಯದ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಇದರ ಬೆಂಗಳೂರು ಚಲೋ ಪ್ರತಿಭಟನಾ ಸಭೆಯಲ್ಲಿ ರಿಕ್ಷಾ ಚಾಲಕರಿಗೆ ಅಸಂಘಟಿತ ಮಂಡಳಿ ರಚಿಸುವಂತೆ ಹಾಗೂ ಕ್ರಷಿ ಕಾರ್ಮಿಕರ ಇತರ ಹಲವು ವಿಚಾರಗಳ ಬಗ್ಗೆ ಹಾಗೂ ಮಂಗಳೂರು ಸಾರ್ವಜನಿಕ ಉದ್ದಿಮೆ (MRPL- NMPT )ಗಳಲ್ಲಿ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಗುತ್ತಿಗೆ ಅಧಾರ ಕೈ ಬಿಡಬೇಕು ಎಂದು ಮತ್ತು ಕಾರ್ಮಿಕರ ಇತರ ಹಲವು ವಿಚಾರಗಳ ಬಗ್ಗೆ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಪ್ರಸ್ತಾಪಿಸದರು.
ಪ್ರತಿಭಟನಾ ಸಭೆಯನ್ನು ಉದ್ದೇ ಶಿಸಿ ಬಿಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಮಲೇಶಂ ಜೀ ಅವರ ಮಾತಾಡುತ್ತಾ
ಭಾರತೀಯ ಮಜ್ದೂರ್ ಸಂಘ ಕಳೆದ 65ವರ್ಷಗಳಿಂದ ದೇಶದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮತ್ತು ಅವರ ಶ್ರೇಯೋಭಿವೃದ್ಧಿಗೆ ಹಾಗೂ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿರುವ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ಅದರ ಜೊತೆಯಲ್ಲಿ ಅವರಲ್ಲಿ ರಾಷ್ಟ್ರೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾ ಕೆಲಸ ಮಾಡುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಉದಾಸೀನ ಮಾಡುತ್ತಿರುವುದು ಮತ್ತು ಹಲವು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ಭಾರತೀಯ ಮಜೂರ್ ಸಂಘ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಲು ಆಗ್ರಹಿಸಿ ಭಾರತೀಯ ಮಜೂರ್ ಸಂಘವು ಕರ್ನಾಟಕ ರಾಜ್ಯದಾದ್ಯಂತ ಡಿಸೆಂಬರ್ |5 ರಂದು ಬೇಡಿಕೆ ದಿನವನ್ನಾಗಿ ಆಚರಿಸಿ ತಾಲೂಕು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಗಿತ್ತು. ತದನಂತರ
ರಾಜ್ಯದಾದ್ಯಂತ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಆದರೆ ರಾಜ್ಯ ಸರಕಾರವು ಈ
ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ, ಆದ್ದರಿಂದ ಫೆಬ್ರವರಿ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ
ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ
ಹೋರಾಟ ನಡೆಸಲಾಗುತ್ತಿದೆಎಂದರು.
ಪ್ರತಿಭಟನೆಯಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ವಿಶಾಲಕ್ಷಿ
ಕೋಟ್ಯಾನ್ ಬಿಎಂಎಸ್ ಜಿಲ್ಲಾದ್ಯಕ್ಷರಾದ ಅನಿಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಎನ್.ಎಮ್.ಪಿ.ಟಿ,ವಿಘ್ನೇಶ್ ನಾಯ್ಕ್ ,ಗೀತಾ ಧರ್ಮರಾಜ್,ಮಧುಸೂಧನ್ ಸುಳ್ಯ,ಚಂದ್ರಶೇಖರ ಕಡಬ,ಪುರಂದರ ಶೆಟ್ಟಿ,,ರೂಪೇಶ್ ಶೆಟ್ಟಿ, ಚಂದ್ರಶೇಖರ ಮರ್ದಾಳ ಕಡಬ,ಜಯಂತ್ ಕುಂಬ್ರ ಉಪಸ್ಥಿತರಿದ್ದರು