• November 21, 2024

ಶ್ರೀ.ಧ. ಮಂ. ಆ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಗಾರ

 ಶ್ರೀ.ಧ. ಮಂ. ಆ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಗಾರ

 


ಧರ್ಮಸ್ಥಳ: ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಗಾರವನ್ನು ಬೆಳ್ತಂಗಡಿ ತಾಲೂಕಿನ ತಶೀಲ್ದಾರರಾಗಿರುವ ಪೃಥ್ವಿ ಸಾನಿಕಂ ಕೆ .ಎಸ್ ಇವರು ದೀಪ ಪ್ರಜ್ವಾಲನೆಯೊಂದಿಗೆ ಉದ್ಘಾಟಿಸಿದರು.

ತದನಂತರ ಮಾತನಾಡುತ್ತಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಯೋಗ ಹಾಗೂ ಅದರ ಕಾರ್ಯವೈಖರಿ ಕುರಿತು ಮಾತನಾಡಿದರು. ಪ್ರಥಮ ಚಿಕಿತ್ಸೆ ಏಕೆ ಅದರ ಮಾಹಿತಿ ನಮಗೆ ಏಕೆ ಬೇಕು ಎಂಬುದನ್ನು ವಿವರಿಸಿದರು.

ನಂತರ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಹರೀಶ್ ಹೆಚ್ ವೈ ಇವರು ಮಾತನಾಡುತ್ತಾ ಪ್ರಥಮ ಚಿಕಿತ್ಸೆ ಇದರ ಕಾರ್ಯಗಾರದ ಕನಸು ಹಾಗೂ ಅದು ನನಸಾದ ರೀತಿ ಹಾಗೂ ಇದರಿಂದ ಮುಂದೆ ವಿದ್ಯಾರ್ಥಿಗಳು ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನು ವಿವರಿಸಿದರು.

ತದನಂತರ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಯುತ ಹರಿದಾಸ್ ಎಸ್ಎಂ ಇವರು ತಾಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಕಾರ್ಯವೈಖರಿ ಹಾಗೂ ಅದರ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು. ಮೈಮ್ ಶೋ ದಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾಗಿರುವ ಶ್ರೀಯುತ ಅನಂತಪದ್ಮನಾಭ ಭಟ್ ಸ್ವಾಗತಿಸಿ ಬೆಳ್ತಂಗಡಿ ತಾಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾಗಿರುವ ಯಶ್ವಂತ್ ಪಟ್ವರ್ಧನ್ ಧನ್ಯವಾದ ಇತ್ತರು.

ಪ್ರಥಮ ಚಿಕಿತ್ಸೆ ಈ ಕಾರ್ಯಗಾರವನ್ನು ನಡೆಸಿಕೊಡಲು ಪ್ರತಿಭಾನ್ವಿತ ಹಾಗೂ ಬೇರೆ ಬೇರೆ ವಿಪತ್ತುಗಳಲ್ಲಿ ಕಾರ್ಯನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ ಅನುಭವಿ ವ್ಯಕ್ತಿ ಡಾಕ್ಟರ್ ಕುಮಾರ್ ವಿ.ಎಲ್. ಸಿ ಅವರು ಶಿವಮೊಗ್ಗದಿಂದ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಇದರ ನಿರ್ದೇಶಕರುಗಳಾಗಿರುವ ಶ್ರೀಯುತ ಪ್ರಮೋದ್ ನಾಯಕ್, ಶ್ರೀಯುತ ಆರ್ವಿನ್ ಡಿಸೋಜಾ ಹಾಗೂ ಶ್ರೀಯುತ ಶಿವಕುಮಾರ್ ಇವರು ಆಗಮಿಸಿದ್ದರು. ಶಾಲಾ ಶ್ರೀಮತಿ ಪರಿಮಳ ಎಂ ವಿ ಕಾರ್ಯಕ್ರಮದ ಉಸ್ತುವಾರಿಯನ್ನು ಹೊಂದಿದ್ದರು. ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಶಾಲೆಯಿಂದ ಹಾಗೂ ಕಾಲೇಜಿನಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಥಮ ಚಿಕಿತ್ಸೆ ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡಿದ್ದರು.

Related post

Leave a Reply

Your email address will not be published. Required fields are marked *

error: Content is protected !!