• July 27, 2024

ಕಕ್ಕಿಂಜೆ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ: ನೂರೇ ಅಜ್ಮೀರ್, ಆಂಬುಲೆನ್ಸ್ ಲೋಕಾರ್ಪಣೆ

 ಕಕ್ಕಿಂಜೆ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ: ನೂರೇ ಅಜ್ಮೀರ್, ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ತಂಗಡಿ: ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಕ್ಕಿಂಜೆ ಮತ್ತು ಎಸ್ಕೆಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆಯ ಆಶ್ರಯದಲ್ಲಿ ಅಗಲಿತ ಸಮಸ್ತದ ನೇತಾರರ ಅನುಸ್ಮರಣೆ,‌ಬೃಹತ್ ಮಜ್ಲಿಸುನ್ನೂರ್,‌ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.

ಜಮಾಅತ್ ಅಧ್ಯಕ್ಷ ಅಬ್ಬಾಸ್ ಸಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಂಶುದ್ದೀನ್ ಅಶ್ರಫಿ ಉದ್ಘಾಟಿಸಿದರು. ಇಸ್ಮಾಯಿಲ್ ದಾರಿಮಿ ಪ್ರಸ್ತಾವನೆಗೈದರು. ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಕೇರಳ ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ಸಯ್ಯಿದ್ ಇಬ್ರಾಹಿಂ‌ ಬಾದುಶಾ ತಂಙಳ್ ಆನೆಕಲ್ ಕೇರಳ ದುಆ ಕ್ಕೆ ನೇತೃತ್ವ ನೀಡಿದರು.

ಸ್ವದಕತುಲ್ಲಾ ದಾರಿಮಿ ಸ್ವಾಗತಿಸಿ ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ನಾಸಿರ್ ಕಲ್ಲಗುಡ್ಡೆ ವಂದಿಸಿದರು. ರಶೀದಿ‌ಜಲಾಲಿ ಕಿರಾಅತ್ ಪಠಿಸಿದರು.


ಮರುದಿನ‌ ಎಸ್ಕೆಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷ ಝುಬೈರ್ ಬಂಡಸಾಲೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ಮೂಸಾ ದಾರಿಮಿ ಉದ್ಘಾಟಿಸಿದರು. ಇಬ್ರಾಹಿಂ ಫೈಝಿ ದುಆ ನೆರವೇರಿಸಿದರು.

ಮುರ್ಷಿದ್ ಫೈಝಿ ಸ್ವಾಗತಿಸಿದರು. ಶಂಶುದ್ದೀನ್ ಅಶ್ರಪಿ,‌ರೆಂಜಲಾಡಿ‌ ಹುಸೈನ್ ದಾರಿಮಿ, ನಝೀರ್ ಅಝ್ಹರಿ, ಇಕ್ಬಾಲ್ ಬಾಳಿಲ ಶುಭಹಾರೈಸಿದರು.


ವಲಿಯುಲ್ಲಾಹಿ ಫೈಝಿ ವಾಯಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ನಡೆಯಿತು.
ಸಮಾರಂಭದಲ್ಲಿ ಇಸ್ಮಾಯಿಲ್ ತಂಙಳ್, ಮಮ್ಮಿಕುಂಞಿ, ರಶೀದ್ ಬಾರಿದ್, ಅಬ್ದುಲ್ ಖಾದರ್, ಹಮ್ಮಬ್ಬ ಹಾಜಿ ), ಅಬ್ದುಲ್ಲ ಹಾಜಿ, ಇಸ್ಮಾಯಿಲ್ ಗೋಳಿದಡಿ, ಅಕ್ಬರ್ ಎ.ಕೆ, ಇಬ್ರಾಹಿಂ ಅಂಕೊತ್ಯಾರು, ಪಿ.ಕೆ ಇಬ್ರಾಹಿಂ ಚಿಬಿದ್ರೆ, ಅಬ್ಬಾಸ್ ಫೈಝಿ, ರಿಯಾಝ್ ಫೈಝಿ, ಯು.ಕೆ ಮೋನು, ಹಮೀದ್ ಕಟ್ಟೆ, ಶಕೀಲ್ ಅರೆಕ್ಕಲ್, ಲೆತೀಫ್ ಗುರುಪುರ, ಫಕೀರಬ್ಬ ಮರೋಡಿ, ಆಸಿಫ್ ಬಾರಿದ್, ರಶೀದ್ ಎಸ್‌ಎ, ಕೆ.ಎಸ್ ಮುಸ್ತಫಾ, ಸಿದ್ದೀಕ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಇಬ್ರಾಹಿಂ ಪಂಪು, ಆರಿಸ್ ಮುಕ್ಕುಡ, ಅಬ್ಬಿ‌ ಚಿಬಿದ್ರೆ, ಎಸ್.ಎ ಅಬೂಬಕ್ಕರ್ ನಿಝಾಮಿ, ಶಂಶುದ್ದೀನ್ ದಾರಿಮಿ, ಎ.ಎಚ್ ಅಬ್ದುಲ್ಲ ದಾರಿಮಿ, ಮುಹಮ್ಮದ್ ಶರ್ವಾನಿ ರಝ್ವಿ ನೆರಿಯ, ಇಬ್ರಾಹಿಂ ಬೋಂಟ್ರಪಾಲ್, ಮುಹಮ್ಮದ್ ಖಾದರ್ ಪಾಲ್ಕಾನ್, ಸಿ‌.‌ಅದ್ದು ಚಾರ್ಮಾಡಿ, ಎ.ಕೆ ಅಬ್ದುಲ್ಲ, ಶಂಶುದ್ದೀಕ್ ಡಿ.ಕೆ, ರಿಯಾಝ್ ಗೋಲ್ಡನ್,‌ನಾಸಿರ್ ಹೆಚ್.ಎ, ಹಫೀಝ್ ಎ.ಕೆ,‌ಲೆತೀಫ್ ಸಂಗಮ್, ಅಬ್ದುಲ್ ರಶೀದ್ ಗಾಂಧಿನಗರ, ಹಂಝ ಡಿ ಮಜಲ್, ಇಮ್ತಿಯಾಝ್ ದಡ್ಡು, ರಫೀಕ್ ಸಿ, ಸಾಜಿದ್ ಎಚ್.ಎ,‌ ನಿಝಾಮ್, ಅಬ್ದುಲ್ ಖಾದರ್ ಪುತ್ತು, ಶರೀಫ್ ಕಜೆ, ಅಕ್ಬರ್ ಕಜೆ, ರಶೀದ್ ನೆರಿಯ, ಮುಹಮ್ಮದ್ ಕಜೆ, ರಶೀದ್ ಯು.ಕೆ, ಸಿರಾಜ್ ಅರೆಕ್ಕಲ್, ಇಮ್ರಾನ್ ಸಿ, ಶಮೀರ್ ಗಾಂಧಿನಗರ ಮೊದಲಾದವರು ಭಾಗಿಯಾಗಿದ್ದರು. ಹನೀಫ್ ಚಾಪಲ್ಲಾ ಸವಣೂರು ಕಾರ್ಯಕ್ರಮ ನಿರೂಪಿಸಿದರು.
ಅನ್ನದಾನ‌ ನಡೆಯಿತು.

Related post

Leave a Reply

Your email address will not be published. Required fields are marked *

error: Content is protected !!