• September 8, 2024

ಮೈರೋಳ್ತಡ್ಕ: ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

 ಮೈರೋಳ್ತಡ್ಕ: ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಂದಾರು: ಬಂದಾರು ಗ್ರಾಮದ ಶಿವ ಫ್ರೆಂಡ್ಸ್ ಕುರಾಯ- ಖಂಡಿಗ ಇವರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜ.7 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ ಮೈರೋಳ್ತಡ್ಕ ದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಮುಂಡೂರು ಧರ್ಮದರ್ಶಿ ಆನಂದ ಗೌಡ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸುಂದರ ಗೌಡ ಖಂಡಿಗ ವಹಿಸಿದ್ದರು. ಕ್ರೀಡಾಂಗಣದ ಉದ್ಘಾಟನೆಯನ್ನು ಪದ್ಮುಂಜ ಸಿಎ ಬ್ಯಾಂಕ್ ನ ಮ್ಯಾನೇಜರ್ ರಘುಪತಿ ಭಟ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಆಗಮಿಸಿ, ಶಿವಪ್ರೆಂಡ್ಸ್ ತಂಡದ ಸಮಾಜಮುಖಿ ಕೆಲಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಮುಂದೆ ಈ ಸಂಘವು ಇನ್ನಷ್ಟು ಉತ್ತಮ ಕೆಲಸದಲ್ಲಿ ಸಕ್ರೀಯವಾಗಿ ತೊಡಗಲಿ ಮುಂದಿನ ವರ್ಷ ಜಿಲ್ಲಾ ಮಟ್ಟದ ಪಂದ್ಯಾಟ ಆಯೋಜಿಸಿ ಇದಕ್ಕೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ. ಅಧ್ಯಕ್ಷ ಪರಮೇಶ್ವರಿ ಕೆ. ಗೌಡ, ಕಕ್ಯಪದವು ಸತ್ಯಧರ್ಮ ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಂದಾರು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಮೋಹನ್ ಬಂಗೇರ ನಾವೂರು, ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು, ದೇವಿಪ್ರಸಾದ್ ಕಡಮ್ಮಾಜೆ ಪಾರ್ಮ್ಸ್ ಮೊಗ್ರು, ಕರಾಯ ಮಂಜುಶ್ರೀ ಪೆಟ್ರೋಲ್ ಪಂಪ್ ಮಾಲಕ ದುರ್ಗೇಶ್, ವಾಣಿ ಕಾಲೇಜು ಉಪನ್ಯಾಸಕ ಶಂಕರ್ ರಾವ್, ಮೈರೋಳ್ತಡ್ಕ ಶಾಲಾ ಶಿಕ್ಷಕ ಮಾಧವ ಗೌಡ, ಬಂದಾರು ಗ್ರಾ.ಪಂ. ಸದಸ್ಯರಾದ ದಿನೇಶ್ ಗೌಡ, ಶ್ರೀಮತಿ ಸುಚಿತ್ರಾ, ಕಣಿಯೂರು ಘಟಕ ವಲಯಾಧ್ಯಕ್ಷ ರುಕ್ಮಯ ಪೂಜಾರಿ, ಪೃಥ್ವಿರಾಜ್ ಬಂಗೇರ ಮಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಹಾಗೂ ಕಲ್ಲೇರಿ ಪವರ್ ಮ್ಯಾನ್ ಸಂದೀಪ್ ಎಂ, ರಾಜ್ಯಮಟ್ಟದಲ್ಲಿ ವಿಜೇತ ತಂಡದ ವಾಲಿಬಾಲ್ ಆಟಗಾರ ಗಗನ್ ಬಟ್ಟೆಮಾರು, ರಾಷ್ಟ್ರಮಟ್ಟದಲ್ಲಿ ವಿಜೇತ ತಂಡದ ಡಾಜ್ ಬಾಲ್ ಆಟಗಾರ ಅಭಿಶ್ರುತ್ ಇಳಂತಿಲ ರವರಿಗೆ ಸನ್ಮಾನಿಸಲಾಯಿತು.
ಡೊಂಬಯ್ಯ ಗೌಡ ಖಂಡಿಗ ಸ್ವಾಗತಿಸಿ
ಕೇಶವ ಗೌಡ ಕಳೆಂಜ ಕಾರ್ಯಕ್ರಮ ನಿರೂಪಣೆ ಮಾಡಿದರು,ನಿರಂಜನ ಗೌಡ ಧನ್ಯವಾದವಿತ್ತರು.

ಫಲಿತಾಂಶ:

ತಾಲೂಕು ಮಟ್ಟದ ವಾಲಿಬಾಲ್ ವಿಜೇತ ತಂಡದಲ್ಲಿ ಪ್ರಥಮ ಕಣಿಯೂರು ವಾರಿಯರ್ಸ್ ಟೀಮ್., ದ್ವಿತೀಯ ಶ್ರೀ ದೇವಿ ಎಲೆಕ್ಟಿಕಲ್ಸ್ ಎ ಟೀಮ್, ತೃತೀಯ ಶ್ರೀ ದೇವಿ ಎಲೆಕ್ಟಿಕಲ್ಸ್ ಬಿ ಟೀಮ್., ಚತುರ್ಥ ವಿ.ವಿ ಬೆಳ್ತಂಗಡಿ ಟೀಮ್., ಬೆಸ್ಟ್ ಪಾಸ‌ ಜಗದೀಶ್ ಮಾಚಾರ್, ಬೆಸ್ಟ್ ಆ್ಯಟ್ಯಾಕರ್ ರೀಪಾಜ್., ಬೆಸ್ಟ್ ಅಲ್ರೌಂಡರ್ : ಗಗನ್ ಮೈರೋಳ್ತಡ್ಕ.
ವಲಯ ಮಟ್ಟದ ವಾಲಿಬಾಲ್ ವಿಜೇತ ತಂಡದಲ್ಲಿ
ಪ್ರಥಮ:ಪ್ರೆಂಡ್ಸ್ ಮೈರೋಳ್ತಡ್ಕ ಟೀಮ್,ದ್ವಿತೀಯ:ಶಿವಪ್ರೆಂಡ್ಸ್ ಕುರಾಯ-ಖಂಡಿಗ ಟೀಮ್,ತೃತೀಯ:ಪ್ರೆಂಡ್ಸ್ ಮಾಚಾರು,ಚತುರ್ಥ: ವಿವೇಕ್ ಪ್ರೆಂಡ್ಸ್ ಕುಂಟಾಲಪಲ್ಕೆ, ಬೆಸ್ಟ್ ಪಾಸರ್ :ಸತೀಶ್,ಬೆಸ್ಟ್ ಆಟ್ಯಾಕರ್:ಗಗನ್ ಮೈರೋಳ್ತಡ್ಕ, ಬೆಸ್ಟ್ ಅಲ್ರೌಂಡರ್ಬ:ಉಮೇಶ್ ನೆಲ್ಲಿದಕಂಡ ‌.ಇವರುಗಾಳು ಪ್ರಶಸ್ತಿ ಪಡೆದುಕೊಂಡರು.

Related post

Leave a Reply

Your email address will not be published. Required fields are marked *

error: Content is protected !!