ಬೆಳ್ತಂಗಡಿ: ದಲಿತ ನಾಯಕ ಪಿ ಡೀಕಯ್ಯ ಸಾವಿನ ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಐಡಿ: ಡೀಕಯ್ಯ ಅವರ ತಾಯಿ ಮನೆಗೆ ಭೇಟಿ ನೀಡಿ ತನಿಖೆ ನಡೆಸಿದ ಸಿಐಡಿ ತಂಡ

ಬೆಳ್ತಂಗಡಿ: ಅಂಬೇಡ್ಕರ್ ವಾದಿ, ದಲಿತ ನಾಯಕ ಪಿ ಡೀಕಯ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಸಿಐಡಿ ತಂಡ ಡಿ.22 ರಂದು ಬೆಳ್ತಂಗಡಿ ಠಾಣೆಗೆ ಆಗಮಿಸಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಅವರಿಂದ ಮಾಹಿತಿ ಪಡೆದು ಪಿ ಡೀಕಯ್ಯ ಅವರು ಸಾವನ್ನಪ್ಪಿದ ಮನೆಗೆ ಹೋಗಿ ತನಿಖೆ ನಡೆಸಿದ್ದರು
ಅಲ್ಲದೆ ಪಿ ಡೀಕಯ್ಯ ಅವರು ಚಿಕಿತ್ಸೆ ಪಡೆದ ಆಸ್ಪತ್ರೆಗೂ ಹೋಗಿ ವೈದ್ಯರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದರು. ಇಂದು ಡಿ.25 ರಂದು ಕಾಣಿಯೂರು ಗ್ರಾಮದ ಪೊಯ್ಯದಲ್ಲಿರುವ ಡೀಕಯ್ಯ ಅವರ ತಾಯಿ ಮನೆಗೆ ಸಿಐಡಿ ತಂಡ ಆಗಮಿಸಿ ದಫನ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ನಂತರ ತನಿಖೆ ನಡೆಸಿದ್ದಾರೆ.