ಧರ್ಮಸ್ಥಳದಿಂದ – ಮಿಯ್ಯಾರುವರೆಗೆ ಸಂಚರಿಸುವ ಬಸ್ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಬೆಳ್ತಂಗಡಿ: ಧರ್ಮಸ್ಥಳ- ಬರೆಂಗಾಯ- ಕಾಯರ್ತಡ್ಕ – ಮಿಯ್ಯಾರುವರೆಗೆ ಸಂಜೆ 5.45ಕ್ಕೆ ಸಂಚರಿಸುತ್ತಿದ್ದ ಬಸ್ಸನ್ನು ರೂಟ್ ಬಸ್ ಮಾಡುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾದ ಪವನ್ ಕುಮಾರ್, ವಿರೇಶ್, ಧನುರಾಜ್ ಹಾಗೂ ಪ್ರಜೀತ್ ಇಂದು( ಡಿ.17) ನಡೆದ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ರವಿಕುಮಾರ್ ಅವರಿಗೆ ಮನವಿಯನ್ನು ನೀಡಿದರು.
ಅದರಂತೆ 6.15 ಕ್ಕೆ ಸಂಚರಿಸುತ್ತಿದ್ದ ಧರ್ಮಸ್ಥಳ- ಕಾಯರ್ತಡ್ಕ- ಶಿಶಿಲ ಬಸ್ ಗಳನ್ನು ಪುನರಾರಂಭಿಸುವಂತೆಯೂ ಮನವಿಯನ್ನು ಮಾಡಲಾಯಿತು. ಶಿಶಿಲದಿಂದ ಬೆಳಿಗ್ಗೆ 7.45 ಕ್ಕೆ ಹೊರಟು ಪಾದೆ ಕಾಯರ್ತಡ್ಕ ಮಾರ್ಗವಾಗಿ ಧರ್ಮಸ್ಥಳ ಕ್ಕೆ ಬಸ್ ಸಂಚರಿಸುತ್ತಿದ್ದು ಸದ್ಯ ಅದನ್ನು ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಈ ಹಿಂದೆಯಂತೆಯೆ ಬಸ್ ಸೇವೆಯನ್ನು ಪುನರಾಂಭಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಲಾಯಿತು.
ಇನ್ನೂ ಮಿಯ್ಯಾರು- ಕಾಯರ್ತಡ್ಕ- ಬರೆಂಗಾಯ- ಧರ್ಮಸ್ಥಳದವರೆಗೆ ಸಂಚರಿಸುತ್ತಿರುವ ಹಾಗೂ ಧರ್ಮಸ್ಥಳ-ಬರೆಂಗಾಯ- ಕಾಯರ್ತಡ್ಕ- ಮಿಯ್ಯಾರುವರೆಗೆ ಸಂಚರಿಸುತ್ತಿದ್ದ ಬಸ್ ಗಳ ಸಮಸ್ಯೆ ಬಗ್ಗೆಯೂ ಮನವಿಯನ್ನು ಮಾಡಲಾಯಿತು.
ಮನವಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.