ನಾವೂರು: ಪ್ರೀತಿಸಿ ಮದುವೆಯಾಗಿದ್ದರೂ ಪತ್ನಿಗೆ ಪತಿಯಿಂದ ಹಿಂಸೆ: ಅಮಲು ಪದಾರ್ಥ ಸೇವಿಸಿ ಹಲ್ಲೆ ಮಾಡಿ ಕಾಲು ಮುರಿದ ಪತಿ
ನಾವೂರು: ಪ್ರೀತಿಸಿ ಮದುವೆಯಾಗಿ ಕಳೆದ 10 ವರ್ಷಗಳಿಂದ ಗಂಡನ ಜೊತೆ ಸಂಸಾರ ಮಾಡಿಕೊಂಡಿದ್ದ ಮಹಿಳೆಯೊಬ್ಬರಿಗೆ ಪತಿ ಅಮಲು ಪದಾರ್ಥ ಸೇವಿಸಿ ಹಲ್ಲೆ ಮಾಡಿ ಕಾಲು ಮುರಿದ ಘಟನೆ ನಾವೂರಿನಲ್ಲಿ ನಡೆದಿದೆ.
ನಾವೂರಿನ ಜನತಾ ಕಾಲೋನಿಯ ನಿವಾಸಿಗಳಾದ ದಿ.ಆಲಿಯಬ್ಬ ಮತ್ತು ಮರಿಯಮ್ಮ ದಂಪತಿಯ ಪುತ್ರಿ ಸೈನಾಝ್(27) ಆಕೆ ಪ್ರಿತಿಸುತ್ತಿದ್ದ ಯುವಕ ಇಂದಬೆಟ್ಟು ಗ್ರಾಮದ ಕಲ್ಲಾಜೆ ನಿವಾಸಿಯಾದ ಸುಲೈಮಾನ್ ಮತ್ತು ಫಾತಿಮಾ ದಂಪತಿಗಳ ಪುತ್ರ ಅಬ್ದುಲ್ ಆರಿಫ್ ಜೊತೆ ನಾವುರಿನ ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 11-3-1012 ರಂದು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರಂಭದಲ್ಲಿ ಪತ್ನಿ ಜೊತೆಗೆ ಚೆನ್ನಾಗಿಯೇ ಇದ್ದ ಆರಿಫ್ ಕ್ರಮೇಣ ಅಮಲು ಪದಾರ್ಥ ಸೇವಿಸಿ ಪತ್ನಿ ಜೊತೆ ಗಲಾಟೆ ಮಾಡುತ್ತಾ ಹಲ್ಲೆ ಮಾಡಲು ಆರಂಭಿಸಿದ್ದಾನೆ. ಈ ವಿಚಾರ ತಿಳಿದು ಎರಡು ಮನೆಯವರು ಸಂಧಾನ ಮಾಡುತ್ತಾ ಇದ್ರು. ಅದಲ್ಲದೆ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು. ಆರಿಫ್ ಗುರುವಾಯನಕೆರೆ ಮರದ ಮಿಲ್ ಮಾಲೀಕರೊಬ್ಬರ ಜೊತೆಯಲ್ಲಿ ಮರದ ಕೆಲಸ ಮಾಡುತ್ತಿದ್ದಾನೆ.
ಘಟನೆಯ ವಿವರ:
ಡಿ.11ರಂದು ಸಂಜೆ 5 ಗಂಟೆಗೆ ಆರಿಫ್ ಇಂದಬೆಟ್ಟುವಿನ ಕಲ್ಲಾಜೆ ತಾಯಿ ಮನೆಗೆ ಹೋಗೋಣ ಎಂದು ಬೈಕ್ ನಲ್ಲಿ ಹೆಂಡತಿ ಮಕ್ಕಳನ್ನು ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಾವುರು ತಲುಪಿದಾಗ ಬೈಕ್ ಕೆಟ್ಟು ಹೋಗಿದೆ. ಬಳಿಕ ಆರಿಫ್ ನಿನ್ನ ಅಣ್ಣ ಹಮೀದ್ ಮನೆಗೆ ಹೋಗೋಣ ಎಂದು ಅಲ್ಲಿಗೆ ಕರೆದುಕೊಂಡು ಹೋದಾಗ ಮನೆಗೆ ಬೀಗ ಹಾಕಿತ್ತು. ನಂತರ ಆರಿಫ್ ಬಾಗಿಲಿನ ಬೀಗ ಮುರಿದು ಸೈನಾಝ್ ಳನ್ನು ಮನೆಯೊಳಗೆ ಕೂಡಿ ಹಾಕಿ ಅಮಲು ಪದಾರ್ಥ ಸೇವಿಸಿದ ಮತ್ತಿನಲ್ಲಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಮದ ಬೈದು ದೇಹದ ವಿವಿಧ ಬಾಗಕ್ಕೆ ಹಲ್ಲೆ ಮಾಡಿ ಚಪಾತಿ ಮಾಡುವ ಲಟ್ಟಣಿಗೆಯಿಂದ ಕಾಲಿಗೆ ಗಂಭೀರ ಹಲ್ಲೆ ಮಾಡಿದ್ದಾನೆ. ಇದರಿಂದ ಆಕೆಯ ಕಾಲು ಮುರಿದಿದ್ದು ಈ ವಿಚಾರ ತಿಳಿದ ಸೈನಾಝ್ ಮನೆಯವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಮದುವರೆಸುತ್ತಿದ್ದಾರೆ.