ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ 2024-25 ನೇ ಸಾಲಿನ ಭಗವದ್ಗೀತಾ ತರಗತಿಗಳ ಆರಂಭ
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ) ನಾವೂರಿನಲ್ಲಿ
ದಿನಾಂಕ 31 ನೇ ಶುಕ್ರವಾರದಂದು ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ 2024-25 ನೇ ಸಾಲಿನ ಭಗವದ್ಗೀತಾ ತರಗತಿಗಳ ಆರಂಭವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ನೇ।ಮೂ।ದಿನೇಶ್ ಭಟ್ ಇವರು ದೀಪ ಪ್ರಜ್ವಲನ ಮೂಡುವ ಮೂಲಕ ನಡೆಸಿಕೊಟ್ಟರು.
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್(ರಿ) ಇದರ ಅಧ್ಯಕ್ಷರಾದ ಹರೀಶ್ ಮೊರ್ತಾಜೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ರಾಜೇಂದ್ರ ಎಂ.,ಟ್ರಸ್ಟಿಗಳಾದ ಹರೀಶ್ ಕಾರಿಂಜ,ಗಣೇಶ್ ನಾವೂರು,ತನಿಯಪ್ಪ ನಲ್ಕೆ,ತಿಮ್ಮಪ್ಪ ಗೋಲ್ತರ,ಶ್ರೀಮತಿ ಪೂರ್ಣಿಮ ಧರ್ಣಪ್ಪ ಮೂಲ್ಯ ,ನಾವೂರಿನ ವೈದ್ಯರಾದ ಡಾ.ಪ್ರದೀಪ್ ಉಪಸ್ಥಿತರಿದ್ದರು.
ಕಳೆದ 8 ವರ್ಷಗಳಿಂದ ಪ್ರತಿ ಬುಧವಾರ ನಾವೂರು ದೇವಸ್ಥಾನದಲ್ಲಿ ಭಗವದ್ಗೀತಾ ಪಾಠ-ಪಠಣ ತರಗತಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಈಗಾಗಲೇ 12 ಹಾಗೂ 15 ಧ್ಯಾಯವನ್ನು ಕಂಠಪಾಠ ಮಾಡಿರುತ್ತಾರೆ. ಈ ವರ್ಷ 16 ಅಧ್ಯಾಯದ ಪಾಠ ಮುಂದುವರಿಯಲಿದೆ.
.