ಬೆಳ್ತಂಗಡಿ: ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಪುಂಜಾಲಕಟ್ಟೆ ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್ ಆಗದೇ ಇದ್ದರೆ ಬೃಹತ್ ಪ್ರತಿಭಟನೆ ನಡೆಸುವಂತೆ ಆಗ್ರಹ
ಬೆಳ್ತಂಗಡಿ: ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಪ್ರತಿಕ್ರಿಯಿಸಿದ್ದಾರೆ.
ವಕೀಲರ ದಿನಾಚರಣೆಯ ಸಂದರ್ಭದಲ್ಲಿ ಪುಂಜಾಲಕಟ್ಟೆ ಪೊಲೀಸರು ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ದೌರ್ಜನ್ಯ ಎಸಗಿದ್ದು ಖಂಡನೀಯ. ಯಾವುದೋ ರಾಜಕೀಯ ಶಕ್ತಿಯ ಪ್ರಭಾವವನ್ನು ಬಳಸಿ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ಒಬ್ಬ ವಕೀಲರನ್ನು ಮದ್ಯ ರಾತ್ರಿ ಕೊರಳ ಪಟ್ಟಿ ಹಿಡಿದು ಎಳೆದೊಯ್ದು ಅವರಿಗೆ ಥಳಿಸಿದ್ದಾರೆ ಇದರ ವಿರುದ್ಧ ವಕೀಲ ಸಮುದಾಯ ಧ್ವನಿ ಎತ್ತಬೇಕಾದುದು ಅತೀ ಅಗತ್ಯ ಎಂದಿದ್ದಾರೆ.
ಮಂಗಳೂರಿನ ಎಲ್ಲಾ ವಕೀಲರು ಸೇರಿ ಇದರ ವಿರುದ್ಧ ಪ್ರತಿಭಟನೆ ಮಾಡಬೇಕು. ಇಲ್ಲವಾದರೆ ಪೊಲೀಸರ ದಬ್ಬಾಳಿಕೆಗೆ ಕೊನೆ ಇಲ್ಲದಾಗುತ್ತದೆ. ಆದಷ್ಟು ಬೇಗ ಪುಂಜಾಲಕಟ್ಟೆಯ ಸಬ್ ಇನ್ಸ್ ಪೆಕ್ಟರ್ ಸಸ್ಪೆಂಡ್ ಆಗಬೇಕು ಇಲ್ಲವಾದಲ್ಲಿ ವಕೀಲ ಸಂಘದ ಮೂಲಕ ಬೃಹತ್ ಪ್ರತಿಭಟನೆ ನಡೆಸಬೇಕು. ತಕ್ಷಣ ವಕೀಲರ ಸಂರಕ್ಷಣ ಕಾಯಿದೆ ಜಾರಿ ತರಲು ಒತ್ತಾಯ ಮಾಡಬೇಕಾಗಿದೆ ಎಂದಿದ್ದಾರೆ.