• December 9, 2024

ಮೊಗ್ರು: ಗಂಭೀರ ಪರಿಸ್ಥಿತಿಯಲ್ಲಿರುವ ತಾಯಿಗೆ ಬೇಕಾಗಿದೆ ನೆರವಿನ ಹಸ್ತ: ತಂದೆಯನ್ನೂ ಕಳೆದುಕೊಂಡು ತಾಯಿಯ ಜೀವಕ್ಕಾಗಿ ಹಾತೊರೆಯುತ್ತಿರುವ ಪುಟ್ಟ ಕಂದಮ್ಮಗಳು

 ಮೊಗ್ರು: ಗಂಭೀರ ಪರಿಸ್ಥಿತಿಯಲ್ಲಿರುವ ತಾಯಿಗೆ ಬೇಕಾಗಿದೆ ನೆರವಿನ ಹಸ್ತ: ತಂದೆಯನ್ನೂ ಕಳೆದುಕೊಂಡು ತಾಯಿಯ ಜೀವಕ್ಕಾಗಿ ಹಾತೊರೆಯುತ್ತಿರುವ ಪುಟ್ಟ ಕಂದಮ್ಮಗಳು

 

ಮೊಗ್ರು:  ಬೆಳ್ತಂಗಡಿ ತಾಲೂಕಿನ, ಮೊಗ್ರು ಗ್ರಾಮದ ಅಲೆಕ್ಕಿಯ ಶ್ರೀಮತಿ ಗಿರಿಜಾ ಗೌಡ ಇವರು ಇತ್ತೀಚೆಗೆ ಬಸ್ ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವ ವೇಳೆ ಆಕಸ್ಮಿಕವಾಗಿ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯಲಾಗಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡಿರುವ ಇವರಿಗೆ ಒಬ್ಬ ಪುತ್ರ ಓರ್ವ ಪುತ್ರಿ ಇದ್ದಾರೆ. ಮಗ  ಎಸ್ ಎಸ್ ಎಲ್ ಸಿ ಮತ್ತು ಮಗಳು ತನ್ನ ಶಾಲೆಗೆ ರಜೆ ಮಾಡಿ ತನ್ನ ಅಮ್ಮನ ಕೆಲಸ ಮತ್ತು ಮನೆ ಕೆಲಸ ಮಾಡುತ್ತಿದ್ದಾಳೆ. ಪುಟ್ಟ ಗುಡಿಸಲಲ್ಲಿದ್ದು ಹೊಸ ಮನೆ ನಿರ್ಮಾಣದ ಕೆಲಸ ಅರ್ಧದಲ್ಲಿದೆ. ತನ್ನ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಶಿಕ್ಷಣಕ್ಕಿಂತ ತಾಯಿ ಜೀವ ಮುಖ್ಯ ಎಂದು ಆ ಪುಟ್ಟ ಬಾಲಕಿ ಮನೆ ಕೆಲಸವನ್ನೂ ತಾಯಿ ಆರೈಕೆಯನ್ನೂ ಮಾಡುತ್ತಿದ್ದಾಳೆ. 

ಈ ತಾಯಿಯು ಆರೋಗ್ಯವಂತೆಯಾಗಲು, ಆ ಪುಟ್ಟ ಮಕ್ಕಳ ಮುಂದಿನ ಜೀವನ ಭವಿಷ್ಯಕ್ಕಾದರೂ ಸಹೃದಯಿಗಳ ನೆರವು ಬೇಕಾಗಿದೆ. ತಂದೆಯನ್ನೂ ಕಳೆದುಕೊಂಡ ಆ ಪುಟ್ಟ ಮಕ್ಕಳು ತನ್ನ ತಾಯಿಯನ್ನು ಉಳಿಸಬೇಕಾಗಿದೆ. ಅಮ್ಮ ಎಂದು ಕರೆಯಲು ಆ ತಾಯಿಯು ಬದುಕುಳಿಬೇಕಾಗಿದೆ. ದಯವಿಟ್ಟು ಆ ಪುಟ್ಟ ಸಂಸಾರದ ಜೀವ, ಜೀವನ ದಾನಿಗಳ ಕೈಯಲ್ಲಿದೆ. ನಿಮ್ಮಲ್ಲಾಗುವ ಸಹಾಯವನ್ನಿತ್ತು ಜೀವವನ್ನು ಉಳಿಸೋಣ.

ಬ್ಯಾಂಕ್ ಡೀಟೇಲ್ಸ್: 
Name: girija
Branch: canara bank padmunja
Account no: 1599101004379
IFSC code:CNRB0001599
Mobile number 9740529940

Related post

Leave a Reply

Your email address will not be published. Required fields are marked *

error: Content is protected !!