ಪುದುವೆಟ್ಟು: ವಿಷಕಾರಿ ಅಣಬೆ ಪದಾರ್ಥ ಸೇವನೆ: ತಂದೆ ಮಗ ಸಾವು
ಪುದುವೆಟ್ಟು: ಪುದುವೆಟ್ಟು ಗ್ರಾಮದ ಕೇರಿಮಾರು ಎಂಬಲ್ಲಿ ತಂದೆ ಮಗ ವಿಷಕಾರಿ ಅಣಬೆ ಪದಾರ್ಥ ಸೇವಿಸಿ ಸಾವನ್ನಪ್ಪಿದ ಘಟನೆ ನ.22ರಂದು ವರದಿಯಾಗಿದೆ.
ವಿಷಕಾರಿ ಅಣಬೆ ಎಂದು ತಿಳಿಯದೆ ಪದಾರ್ಥವನ್ನು ಮಾಡಿ ಸೇವಿಸಿದ್ದು ಈ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತಂದೆ ಗುರುವ(85), ಪುತ್ರ ಓಡಿ(45) ಮೃತಪಟ್ಟ ದುರ್ದೈವಿಗಳು.
ತೀರ ಬಡ ಕುಟುಂಬದ ಮನೆಯಲ್ಲಿ ಗುರುವ ಸಹಿತ ಇಬ್ಬರು ಮಕ್ಕಳು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದರಿಂದ ಅನಾಹುತ ಸಂಭವಿಸಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಮತ್ತೊಂದು ಅವಘಡ ತಪ್ಪಿದೆ.
ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿದ್ದು. ತನಿಖೆ ಬಳಿಕ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ