• December 8, 2024

ಮುಂಡತ್ತೋಡಿ: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ: ಯುವತಿ ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಸೂಚನೆ

 ಮುಂಡತ್ತೋಡಿ: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ: ಯುವತಿ ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಸೂಚನೆ

 

ಉಜಿರೆ: ಇಲ್ಲಿಯ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕೆಂದು ಮನೆಯಿಂದ ಬಂದಿದ್ದು, ಕೆಲಸಕ್ಕೂ , ಮನೆಗೂ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿರುವ ಘಟನೆ ನ.21ರಂದು ನಡೆದಿದೆ.

ನಾಪತ್ತೆಯಾದ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಶೀನ ಎಂವರ ಪುತ್ರಿ ಕು.ಪ್ರಮೀಳಾ(18).

ಈಕೆ ನ.21 ರಂದು ಕೆಲಸಕ್ಕೆಂದು ಬೆಳಗ್ಗೆ ಹೊರಟಿದ್ದು ಕೆಲಸಕ್ಕೂ , ಮನೆಗೂ ಹೋಗದೆ ಇದ್ದಾಗ ಮನೆಯವರು ಸಂಬಂಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಸಿಗದೇ ಇದ್ದಾಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಕೆ ಕನ್ನಡ, ತುಳು ಮಾತನಾಡುವವಳಾಗಿದ್ದು , ಮನೆಯಿಂದ ಹೋದ ವೇಳೆ ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕೆಂಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದಾರೆ. ಈಕೆ ಎಲ್ಲಿಯಾದರು ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ(08256232093) ತಿಳಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!