ಮುಂಡಾಜೆ ಪ್ರಾ.ಕೃ.ಪ.ಸ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಫಡ್ಕೆ ಹಾಗೂ ಮಧುಕರ ರಾವ್ ಇವರಿಗೆ ಬೀಳ್ಕೊಡುಗೆ ಸಮಾರಂಭ
ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಛೇರಿ ಸಹಾಯಕರಾಗಿ ಕರ್ತವ್ಯವನ್ನು ಆರಂಭಿಸಿ ಮುಂದೆ ವಿವಿಧ ಹುದ್ದೆಗಳನ್ನು ಅಲಂಕರಿಸಿ ವಿವಿಧ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರಾಗಿ ನಂತರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಸುಧೀರ್ಘ 44 ವರ್ಷಗಳಲ್ಲಿ ಕರ್ತವ್ಯ ನಿರ್ವಹಿಸಿದ ನಾರಾಯಣ ಫಡ್ಕೆ ಮತ್ತು ಮತ್ತು ಗುಮಾಸ್ತರಾಗಿ ಕರ್ತವ್ಯವನ್ನು ಆರಂಭಿಸಿ ನಂತರ ಭಡ್ತಿಗೊಂಡು ಶಾಖಾ ವ್ಯವಸ್ಥಾಪಕರಾಗಿ ವಿವಿಧ ಶಾಖೆಗಳಲ್ಲಿ 36 ವರ್ಷಗಳು ಕರ್ತವ್ಯ ನಿರ್ವಹಿಸಿದ ಮಧುಕರ ರಾವ್ ಅ.31 ರಂದು ನಿವೃತ್ತರಾದ ಇವರಿಗೆ ನ.1 ರಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮುಂಡಾಜೆ ಸನ್ಯಾಸಿ ಕಟ್ಟೆ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭವು ಜರುಗಿತು.
ಈ ಸಂದರ್ಭದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಜನಾರ್ಧನ ಗೌಡ ನೂಜಿ, ಉಪಾಧ್ಯಕ್ಷ ಪ್ರಕಾಶ ನಾರಾಯಣ ಕೆ, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.