ಉಜಿರೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ವಾಪಾಸ್ಸಾದ ಬದುಕುಕಟ್ಟೋಣ ಬನ್ನಿ ತಂಡದ ಇಬ್ಬರು ಸಂಚಾಲಕರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ
ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಆಚರಣಾ ಸಮಿತಿ ವತಿಯಿಂದ ಬದುಕು ಕಟ್ಟೋಣ ಬನ್ನಿ ತಂಡ ಕ್ಕೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ನ.1ರಂದು 2022ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾಗಿರುವ ಮೋಹನ್ ಕುಮಾರ್ ಹಾಗೂ ಸಂಧ್ಯಾ ಟ್ರೇಡರ್ಸ್ ಮಾಲಕರು ರಾಜೇಶ್ ಪೈ ಯವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನವನ್ನು ಸ್ವೀಕರಿಸಿ ಪ್ರಶಸ್ತಿಯೊಂದಿಗೆ ಉಜಿರೆ ಪೇಟೆಗೆ ಆಗಮಿಸಿದ ಸಂಚಾಲಕರಾದ ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ಅವರನ್ನು ಗೌರವಪೂರ್ಣವಾಗಿ ಬದುಕು ಕಟ್ಟೋಣ ಬನ್ನಿ ತಂಡದ ಕಾರ್ಯಕರ್ತರು ಹಾಗೂ ಗಣ್ಯರು ಉಜಿರೆ ಜನಾರ್ಧನ ಸ್ವಾಮಿ ವೃತ್ತದ ಬಳಿ ಅದ್ದೂರಿಯಾಗಿ ಸ್ವಾಗತಕೋರಿದರು.
ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಆರ್ ಎಂ ಅರ್ಥ್ ಮೂವರ್ಸ್ ರವಿ ಚಕ್ಕಿತ್ತಾಯ, ಶಶಿಧರ್ ಎಂ ಕಲ್ಮಂಜ, ಶ್ರೀಧರ್ ಎಂ ಕಲ್ಮಂಜ, ಜಯಪ್ರಕಾಶ್ ಶೆಟ್ಟಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್, ಉದ್ಯಮಿಗಳಾದ ರಾಮಚಂದ್ರ ಶೆಟ್ಟಿ, ಮಹಾಲಕ್ಷ್ಮಿ ಸ್ಟೋರ್ ಮಾಲಕ ಭರತ್ ಕುಮಾರ್, ಜಯಂತ ಮಡಿವಾಳ ಮುಂಡಾಜೆ, ಉಜಿರೆ ಮೋಹನ್ ಶೆಟ್ಟಿಗಾರ್, ಶ್ರೀನಿವಾಸ್ ಎಡಪಡಿತ್ತಾಯ, ಕಾಮಧೇನು ಮಾಧವ ಹೊಳ್ಳ, ಮೋಹನ್ ಶೆಟ್ಟಿಗಾರ್ , ಸುಧಾಕರ್ , ಮಂಜುನಾಥ ಗೌಡ ಪೆರ್ಲ, ಜಯಪ್ರಕಾಶ್ ಶೆಟ್ಟಿ ಮತ್ತು ಗ್ರಾ.ಪಂ ಸದಸ್ಯರು ಹಾಗೂ ಉಜಿರೆಯ ಅಂಗಡಿ ಮಾಲಕರು ಉಪಸ್ಥಿತರಿದ್ದರು.