ನಾರಾವಿ ಮಾಗಣೆ ಬಸದಿ ಭ! ಶ್ರೀ ಧರ್ಮನಾಥ ಸ್ವಾಮಿ ಜಿನಮಂದಿರಕ್ಕೆ ಭೇಟಿ ನೀಡಿ ಭಗವಂತರ ದರ್ಶನ ಪಡೆದ ಸಚಿವ ವಿ. ಸುನಿಲ್ ಕುಮಾರ್
ನಾರಾವಿ: ಮಾಗಣೆ ಬಸದಿ ಭ! ಶ್ರೀ ಧರ್ಮನಾಥ ಸ್ವಾಮಿ ಜಿನಮಂದಿರಕ್ಕೆ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆಗಿರುವ ವಿ. ಸುನಿಲ್ ಕುಮಾರ್ ರವರು ಭೇಟಿ ನೀಡಿ ಭಗವಂತರ ದರ್ಶನ ಪಡೆದು ಮುಂದೆ ನಡೆಯುವ ಜೀರ್ಣೋದ್ಧಾರ ಕಾರ್ಯಗಳ ಮಾಹಿತಿಯನ್ನು ಪಡೆದರು .
ಈ ಸಂದರ್ಭದಲ್ಲಿ ಬಸದಿಯ ಆಡಳಿತ ಸಮಿತಿ ಅಧ್ಯಕ್ಷರಾದ ನಿರಂಜನ್ ಜೈನ್,ನಾರಾವಿ ಜೈನ್ ಮಿಲನ್ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಹಾಗೂ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರಾದ ಯಾನ್ ಪ್ರೇಮ್ ಕುಮಾರ್ ಜೈನ್ , ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಜಯವರ್ಮ ಜೈನ್ ಮಾಪಲು ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರ್ಷೇಂದ್ರ ಜೈನ್ ಮತ್ತು ಮಹಾವೀರ ಬುಣ್, ವಿನಯ್ ಕುಮಾರ್ ಜೈನ್, ಜ್ವಾಲಾ ಪ್ರಸಾದ್ ಜೈನ್ , ಶಶಿಕಾಂತ್ ಜೈನ್, ಪದ್ಮರಾಜ ಜೈನ್, ಮುನಿರಾಜ ಜೈನ್, ಹರ್ಷಿತ್ ಪುರೋಹಿತರು, ಜಿನೇಂದ್ರ ಜೈನ್ ಹಾಜರಿದ್ದರು.