ಇಂದಬೆಟ್ಟು: ಬೆಳ್ತಂಗಡಿ ತಾಲೂಕು ವಿ.ಹಿಂ.ಪ. ಭಜರಂಗದಳ ನೇತೃತ್ವದಲ್ಲಿ 6 ಗ್ರಾಮಗಳ ಸಮಸ್ತ ಹಿಂದೂ ಬಾಂಧವರಿಗಾಗಿ “ಕೆಸರ್ ಡೊಂಜಿದಿನ” ಕ್ರೀಡಾ ಕೂಟ
ಇಂದಬೆಟ್ಟು: ವಿಶ್ವ ಹಿಂದೂ ಪರಿಷತ್ ಭಜರಂಗದಳ ನಡ- ಕನ್ಯಾಡಿ, ನಾವೂರು, ಇಂದಬೆಟ್ಟು, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಘಟಕ ಇದರ ನೇತೃತ್ವದಲ್ಲಿ 6 ಗ್ರಾಮಗಳ ಸಮಸ್ತ ಹಿಂದೂ ಭಾಂದವರಿಗಾಗಿ ” ಕೆಸರ್ ಡೊಂಜಿದಿನ” ಕ್ರೀಡಾ ಕೂಟ ಕಾರ್ಯಕ್ರಮವು ಅ.23 ರಂದು ಶ್ರೀ ಗಂಗಯ್ಯ ಮುಗೇರ ದೇವನಾರಿ ಇಂದಬೆಟ್ಟು ಇವರ ಗದ್ದೆಯಲ್ಲಿ ಜರುಗಿತು
ಕ್ರೀಡಾ ಕೂಟದ ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕರಾದ ಕೆ.ಮೋಹನ್ ಕುಮಾರ್ ನೆರವೇರಿಸಿ ಮಾತನಾಡಿ ಮೋದಿಯವರು ಪಿಎಫ್ ಐ ಬ್ಯಾನ್ ಮಾಡಿರುವುದು ಶ್ಲಾಘನೀಯ ಕಾರ್ಯ. ಇಂತಹ ಕಾರ್ಯಕ್ರಮಗಳು ಇನ್ನೂ ಕೂಡ ನಡೆಯಬೇಕು. ಎಲ್ಲರೂ ಒಟ್ಟುಗೂಡುವಂತಹ ಕಾರ್ಯಕ್ರಮ ಇದಾಗಿದೆ. ಇಂದಬೆಟ್ಟು ಗ್ರಾಮದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸಿರುವ ವಿಶ್ವಹಿಂದೂ ಪರಿಷತ್ ಭಜರಂಗದಳ ನಡ- ಕನ್ಯಾಡಿ, ನಾವೂರು, ಇಂದಬೆಟ್ಟು, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಘಟಕಗಳಿಗೆ ಶುಭವಾಗಲಿ. ಇಂತಹ ಕಾರ್ಯಗಳು ಇನ್ನೂ ಹೆಚ್ಚು ಹೆಚ್ಚು ನಡೆಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರು ದಿನೇಶ್ ಚಾರ್ಮಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷ ಆನಂದ ಅಡೀಲು, ನಾವೂರು ಆರೋಗ್ಯ ಕ್ಲೀನಿಕ್ ನ ಡಾ ಪ್ರದೀಪ್, ಇಂದಬೆಟ್ಟು ಗುತ್ತುವಿನ ಅಜಿತ್ ಕುಮಾರ್ ಜೈನ್, ಇಂದಬೆಟ್ಟು ಅರ್ಧ ನಾರೀಶ್ವರ ದೇವಸ್ಥಾನ ದೇವನಾರಿ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಗೌಡ ಮನ್ನಡ್ಕ, ಅರ್ಚಕರಾದ ಆನಂದ ಭಟ್, ಸಿ.ಎ ಬ್ಯಾಂಕ್ ಬಂಗಾಡಿ ನಿರ್ದೇಶಕರು ಲಕ್ಷ್ಮಣ ಗೌಡ, ಶ್ರೀ ದುರ್ಗಾದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ, ಮಹರಾಜ್ ಕನ್ ಸ್ಟ್ರಕ್ಷನ್ ಬಂಗಾಡಿ ವಿಶ್ವನಾಥ ಗೌಡ ಉದ್ದಾರ, ನಾವೂರು ಕಾ.ವಿಶ್ವನಾಥ್, ಕುದ್ರೋಳಿ ಬಿ.ಕೆ ಸುಬ್ಬರಾವ್, ಪ್ರಭಾಕರ ಶೆಣೈ ಕಿರೆಂಗಿನಡ್ಕ, ಕಡಿರುದ್ಯಾವರ, ಗಂಗಯ್ಯ ಮುಗೇರ ನಾಟಿವೈದ್ಯರು ದೇವನಾರಿ ಉಪಸ್ಥಿತರಿದ್ದರು.