• September 8, 2024

ಪಾಂಡವರಕಲ್ಲು: ಹತ್ತನೆ ತರಗತಿ ಬಾಲಕಿಯ ನಾಪತ್ತೆ ಪ್ರಕರಣ: ಪುಂಜಾಲಕಟ್ಟೆ ಎಸ್ ಐ ಗಂಭಿರ ಕಾರ್ಯಾಚರಣೆ: ಬಾಲಕಿ ಉಪ್ಪಿನಂಗಡಿಯಲ್ಲಿ ಪತ್ತೆ

 ಪಾಂಡವರಕಲ್ಲು: ಹತ್ತನೆ ತರಗತಿ ಬಾಲಕಿಯ ನಾಪತ್ತೆ ಪ್ರಕರಣ: ಪುಂಜಾಲಕಟ್ಟೆ ಎಸ್ ಐ ಗಂಭಿರ ಕಾರ್ಯಾಚರಣೆ: ಬಾಲಕಿ ಉಪ್ಪಿನಂಗಡಿಯಲ್ಲಿ ಪತ್ತೆ

ಪುಂಜಾಲಕಟ್ಟೆ: ಪಾಂಡವರಕಲ್ಲು ಎಂಬಲ್ಲಿನ ಹತ್ತನೆ ತರಗತಿ ಬಾಲಕಿಯೋರ್ವಳು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು ಇದೀಗ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದಾಳೆ.

ನಾಪತ್ತೆಯಾಗಿದ್ದ ಬಾಲಕಿಯ ಹೆತ್ತವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಕಿಡ್ನ್ಯಾಪ್ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣದಂತೆ ಪುಂಜಾಲಕಟ್ಟೆ ಎಸ್ ಐ ಸುತೇಶ್ ಅವರು ಬಾಲಕಿಯ ಕಾರ್ಯಚರಣೆಯಲ್ಲಿ ಗಂಭಿರವಾಗಿ ತೊಡಗಿದ್ದು ಇದೀಗ ಕಾರ್ಯಚರಣೆಗೆ ಯಶಸ್ವಿ ದೊರೆತಿದೆ. ಬಾಲಕಿ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದಾಳೆ.
ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಆರೋಪಿ ಬಾಲಕಿಯ ನೆರೆ ಮನೆಯವನಾಗಿದ್ದು ನೌಶದ್ ಎಂದು ತಿಳಿದುಬಂದಿದೆ. ಈತ ಮೈಸೂರಿನಲ್ಲಿರುವ ಕುರಿತು ಮಾಹಿತಿ ದೊರರತಿದೆ.

Related post

Leave a Reply

Your email address will not be published. Required fields are marked *

error: Content is protected !!