ಶ್ರಿ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಬದುಕುಳಿದ ಜೀವ: ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಹಾಸನದ ಯುವಕನ ಉಳಿಯಿತು ಪ್ರಾಣ: ಮಂಜುನಾಥನ ಕೃಪೆ ನನಗಿತ್ತು ಎಂದ ಯುವಕ
ಧರ್ಮಸ್ಥಳ: ವಿವಾಹಿತ ಯುವಕನೊಬ್ಬ ಧರ್ಮಸ್ಥಳದ ಕಾಡಿಗೆ ಬಂದು ಸೆಲ್ಫಿ ವಿಡಿಯೋ ಮಾಡುತ್ತಾ ವಿಷ ಸೇವಿಸಿ ಕೊನೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮಹಿಮೆಯಿಂದ ಬದುಕಿ ಉಳಿದು ಇದೀಗ ಆರೋಗ್ಯವಾಗಿ ಮರಳಿ ಮನೆಗೆ ಸೇರುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ನಿವಾಸಿ ಸುನಿಲ್ ಕೆಎಲ್ ಸೆಪ್ಟೆಂಬರ್ 28ರಂದು ಮಧ್ಯಾಹ್ನ 2 ಗಂಟೆಗೆ ಹೀರೋ ಹೋಂಡಾ ಬೈಕಿನಲ್ಲಿ ಬಂದಿದ್ದಾನೆ. ದೇವರ ದರ್ಶನ ಮುಗಿಸಿ ನೇತ್ರಾವತಿ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹೋಗಿ ಕುಳಿತು ತನ್ನ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿ ಕೃಷಿ ಜಮೀನಿಗೆ ಉಪಯೋಗಿಸುವ ರೌಂಡ್ ಅಪ್ ಎಂಬ ವಿಷ ಪದಾರ್ಥವನ್ನು ಕುಡಿದಿದ್ದಾನೆ ನಂತರ ಧರ್ಮಸ್ಥಳ ದೇವರ ದರ್ಶನ ಪಡೆದು ಫೋಟೋ ಹಾಗೂ ತಾನು ವಿಷ ಸೇವಿಸಿದಾಗ ಮಾಡಿದ ವಿಡಿಯೋವನ್ನು ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾನೆ ಇದನ್ನು ನೋಡಿದ ಕುಟುಂಬದವರು ಸ್ನೇಹಿತರಿಗೆ ಮಾಹಿತಿ ನೀಡಿ ಅದರಂತೆ ಧರ್ಮಸ್ಥಳ ಪೊಲೀಸರಿಗೂ ತಿಳಿಸಿದ್ದಾರೆ ತಕ್ಷಣ ಎಚ್ಚೆತ್ತು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸುಮಾರು ಸಂಜೆ 4:15ಕ್ಕೆ ಅರೆಪ್ರಜ್ಞಾ ಸ್ಥಿತಿಯಲ್ಲಿ ಸುನಿಲ್ ಪತ್ತೆಯಾಗಿದ್ದಾರೆ ಕೂಡಲೇ ಪೊಲೀಸರು ಆಟೋದಲ್ಲಿ ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದಾರೆ ಆದರೆ ಅಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.
ಇದೀಗ ಪವಾಡ ಸದೃಶವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮಹಿಮೆಯಿಂದ ಅವರು ಗುಣಮುಖರಾಗಿ ಅಕ್ಟೋಬರ್ 4 ರಂದು ಮನೆಗೆ ತೆರಳಿದ್ದಾರೆ ಸುನಿಲ್ ಕಳೆದ ನಾಲ್ಕು ವರ್ಷಗಳಿಂದ ರಾಮನಾಥಪುರದಲ್ಲಿ ಮದುವೆಯಾಗಿ ಆರು ತಿಂಗಳ ಮಗು ಕೂಡ ಇದೆ ಹೆಂಡತಿ ಮಗು ತಾಯಿ ಮನೆಗೆ ಹೋಗಿದ್ದರು.
ಸುನಿಲ್ ಏನು ಹೇಳುತ್ತಾರೆ????
ನನ್ನ ಮನೆಯಲ್ಲಿ ಬೆಳಗಿನ ಉಪಹಾರ ತಿಂದು ತಾಯಿ ಜೊತೆ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿದ್ದೆ ನಂತರ ನೇರ ಬೈಕಿನಲ್ಲಿ ದಾರಿ ಮಧ್ಯ ಬರುವಾಗ ಅಂಗಡಿಯಿಂದ ವಿಷ ಖರೀದಿಸಿ ಧರ್ಮಸ್ಥಳಕ್ಕೆ ಮಧ್ಯಾಹ್ನ ಬಂದು ಮಂಜುನಾಥನ ದರ್ಶನ ಪಡೆದು ಅಲ್ಲಿಂದ ಹೋಟೆಲ್ ಲಕ್ಷ್ಮಿ ಕೃಪಾಕ್ಕೆ ಹೋಗಿ ಊಟ ಮುಗಿದ ನೇತ್ರಾವತಿ ಬಳಿ ಇರುವ ಮಹಾತ್ಮ ಗಾಂಧಿ ವೃ ತ್ತದ ಬಳಿಯ ಕಾಡಿಗೆ ಹೋಗಿ ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದು ಮತ್ತು ಸುತ್ತಮುತ್ತಲಿನ ಎಲ್ಲಾ ಫೋಟೋಗಳನ್ನು ಅಕ್ಕ ಅಣ್ಣನಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದೆ. ಪೊಲೀಸರು ಆಟೋ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞೆ ಪೂರ್ತಿ ತಪ್ಪಿದ್ದರಿಂದ ಏನು ನಡೆಯಿತು ಅಂತ ಗೊತ್ತಾಗಿಲ್ಲ ದೇವರ ದಯೆಯಿಂದ ಬದುಕಿ ಆರೋಗ್ಯ ಬಗ್ಗೆ ಆಸ್ಪತ್ರೆಯನ್ನು ಮನೆಗೆ ಬಂದಿದ್ದೇನೆ ಮುಂದಿನ ವಾರ ಕುಟುಂಬದವರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸುನಿಲ್ ಕೆ ಎಲ್ ಮಾಹಿತಿ ನೀಡಿದ್ದಾರೆ.