ಧರ್ಮಸ್ಥಳ: ನ.13 ರಂದು ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಡಾ| ಡಿ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ: ಪ್ರಗತಿಬಂಧು ಜ್ಞಾನ ವಿಕಾಸಗಳ ಮತ್ತು ಸ್ವ- ಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಹಾಗೂ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ನ.13 ರಂದು ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆಯನ್ನು ನ.2 ರಂದು ಧರ್ಮಾಧಿಕಾರಿಗಳಾದ ಡಾ|ಡಿ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಪ್ರಗತಿಬಂಧು ಜ್ಞಾನವಿಕಾಸಗಳ/ ಸ್ವಸಹಾಯ ಸಙಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ ಆರ್, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾದ ಲಕ್ಷ್ಮಣ ಪಿ, ಹುಣ್ಸೆಕಟ್ಟೆ ಎಸ್ ಕೆ ಡಿ ಆರ್ ಡಿಪಿ ಸೇವಾ ಪ್ರತಿನಿಧಿ ವನಿತಾ, ಉಪಾಧ್ಯಕ್ಷೆ ಮೀನಾಕ್ಷಿ ಪ್ರಭಾಕರ್ , ಪಂಜಿರ್ಪು ಕೃಷ್ಣಕುಮಾರ್ ಐತಾಳ್ ಹಾಗೂ ನಾರಾಯಣ ರಾವ್ ಮುಗುಳಿ ಉಪಸ್ಥಿತರಿದ್ದರು.