ಮಂಗಳೂರು: ಕಂಬಳ ಪ್ರಿಯರಿಗೆ ಸಿಹಿ ಸುದ್ದಿ: ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿ ಪ್ರಕಟ
ಮಂಗಳೂರು: ಕಂಬಳ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ . ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟವಾಗಿದೆ. ಮಂಗಳೂರು ಜಿಲ್ಲಾ ಕಂಬಳ ಸಮಿತಿ ಸಭೆಯು ಇತ್ತೀಚೆಗೆ ಮೂಡಬಿದ್ರೆಯಲ್ಲಿ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಂಬಳದ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಕಂಬಳ ಋತು ಪ್ರಾರಂಭಗೊಳ್ಳಲಿದ್ದು ಏಪ್ರಿಲ್ 8ರವರೆಗೆ ಒಟ್ಟು 24 ಕಂಬಳಗಳು ನಡೆಯಲಿದೆ . ಈ ಬಾರಿ ಪಣಪಿಳದಲ್ಲಿ ಹೊಸದಾಗಿ ಕಂಬಳ ಆಯೋಜನೆಗೊಳ್ಳುತ್ತಿದೆ ಮಂಗಳೂರು ಪಿಲಿಕುಳದ ಕಂಬಳಕ್ಕೂ ನವೆಂಬರ್ 12 ರಂದು ದಿನಾಂಕ ನೀಡಲಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ .
ಪಿಲಿಕುಳದಲ್ಲಿ ಕೆಲವು ವರ್ಷಗಳಿಂದ ಕಂಬಳಗಳು ಸ್ಥಗಿತಗೊಂಡಿದ್ದವು. ಈ ಬಾರಿ ಆಯೋಜಿಸಲು ಜಿಲ್ಲಾಡಳಿತ ಉತ್ಸುಕತೆ ತೋರ್ಪಡಿಸಿದೆ ಎನ್ನಲಾಗಿದೆ.
ಕೊರೋನ ಸಮಸ್ಯೆಯಿಂದಾಗಿ ಕಳೆದ ಬಾರಿಯ ಕಂಬಳ ಋತು ಡಿಸೆಂಬರ್ 5 ರಿಂದ ಆರಂಭಗೊಂಡಿತ್ತು ಮತ್ತು ಒಟ್ಟು 18 ಕಂಬಗಳ ದಿನಾಂಕವನ್ನು ಕಂಬಳ ಸಮಿತಿ ಪ್ರಕಟಿಸಿದ್ದು. ಐದು ಕಂಬಳ ಪೂರ್ಣಗೊಳ್ಳುವಷ್ಟರಲ್ಲಿ ವಾರಂತ್ಯ ಕರ್ಫ್ಯೂ ಜಾರಿಗೊಂಡ ಹಿನ್ನೆಲೆಯಲ್ಲಿ ಉಳಿದ 11 ಕಂಬಳಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಬಳಿಕ ಫೆಬ್ರವರಿಯಲ್ಲಿ ವಾರಂತ್ಯ ಕರ್ಫ್ಯೂ ತೆರವುಗೊಂಡ ಬಳಿಕ ಮರು ಆರಂಭಗೊಂಡು ಏಪ್ರಿಲ್ ನಲ್ಲಿ ಕೊನೆಗೊಂಡಿತ್ತು. ಈ ಬಾರಿ ಹಿಂದಿನಂತೆ ನಿಗದಿತ ಸಮಯಕ್ಕೆ ಆರಂಭಗೊಳ್ಳುತ್ತಿದೆ