ಉಜಿರೆಯಲ್ಲಿ ಸೆ.30 ರಂದು ಹೋಟೆಲ್ ಓಶಿಯನ್ ಪರ್ಲ್ ಇದರ 5 ನೇ ಶಾಖೆ ಶುಭಾರಂಭ:ಪತ್ರಿಕಾಗೋಷ್ಠಿ
ಉಜಿರೆ: ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್ ಪರ್ಲ್, ಉಜಿರೆಯಲ್ಲಿ ಸೆ.30ರಂದು ತನ್ನ 5ನೇ ಶಾಖೆಯನ್ನು ತೆರೆಯಲಿದೆ. ಓಶಿಯನ್ ಪರ್ಲ್ ಹೋಟೆಲ್ಸ್ ಪ್ರೈ.ಲಿಮಿಟೆಡ್ ಸಂಸ್ಥೆ ಈಗಾಗಲೇ ಕರ್ನಾಟಕ ರಾಜ್ಯದಲ್ಲ 4 ಶಾಖೆಗಳನ್ನು ಹೊಂದಿದೆ. ಇದೀಗ 5ನೇ ಶಾಖೆಯನ್ನು ಉಜಿರೆಯಲ್ಲಿ ಆರಂಭಿಸಲಿದ್ದೇವೆ. ಸೆ.30ರಂದು ಉಜಿರೆಯಲ್ಲಿ ತಮ್ಮ ಹೊಸ ಹೋಟೆಲ್ ಉದ್ಘಾಟನೆಯೊಂದಿಗೆ ತನ್ನ ಐಷಾರಾಮಿ ಹೋಟೆಲ್ ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆಗೊಳಿಸಿದಂತಾಗಿದೆ ಎಂದು ಕಾಶಿ ಪ್ಯಾಲೆಸ್ ಮಾಲಕರು ಶಶಿಧರ್ ಶೆಟ್ಟಿ ತಿಳಿಸಿದರು.
ಅವರು ಸೆ.28ರಂದು ಉಜಿರೆ ಕಾಶಿ ಪ್ಯಾಲೇಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಫೆಸಿಫಿಕ್”-ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫೆರೆನ್ಸ್ ಹಾಲ್ ಇಲ್ಲಿದ್ದು, ಸಾಗರ ರತ್ನ” ಬ್ರಾಂಡ್ ಸಸ್ಯಾಹಾರಿ ರೆಸ್ಟೊರೆಂಟ್, 140 ಮಂದಿಯ ಆಸನ ವ್ಯವಸ್ಥೆಯ ಸಾಮರ್ಥ್ಯ ಹೊಂದಿದ್ದು, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಕೋರಲ್ ಅನ್ನು ಹೊಂದಿದೆ. “ಓಶಿಯನ್ ಪರ್ಲ್ ಜಿಮ್” ದೇಹ ದಾರ್ಡ್ಯತೆ ಬಯಸುವ ಉತ್ಸಾಹಿ ಜನರ ಗುಣಮಟ್ಟದ ಜೀವನಕ್ಕೆ ಮತ್ತು ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ ಎಂದರು.
ಜಯರಾಮ್ ಬನಾನ್ ಮತ್ತು ಶಶಿಧರ್ ಶೆಟ್ಟಿಯವರ 75 ವರ್ಷಗಳ ಸಂಯೋಜಿತ ಅನುಭವದ ಫಲದೊಂದಿಗೆ ಓಶಿಯನ್ ಪರ್ಲ್, ಉಜಿರೆಯ ಕಾಶಿ ಪ್ಯಾಲೇಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಶಶಿಧರ ಶೆಟ್ಟಿಯವರ ಮಾತೃಶ್ರೀ ಕಾಶಿ ಶೆಟ್ಟಿಯವರು ಇದನ್ನು ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶನ್ , ಜಿ.ಎಂ ಓಶಿಯನ್ ಪರ್ಲ್ ನಿತ್ಯಾನಂದ ಮಂಡಲ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಶಶಿಕುಮಾರ್ ಉಪಸ್ಥಿತರಿದ್ದರು.