ಉಡುಪಿ: ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ಇವರಿಂದ ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ
ಉಡುಪಿ: “ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ಇವರಿಂದವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ ಕಾಯ೯ಕ್ರಮ ಸೆ.21 ರಂದು ರೋಟರಿ ಸೌಟ್ಕ್ ಭವನ್ ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿ ಉಡುಪಿಯಲ್ಲಿ ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷತೆ ಯನ್ನು ಶಾಖಾ ಮುಖ್ಯಸ್ಥ ಮಲಬಾರ್ ಹಪೀಜ್ ರೆಹಮಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಉಡುಪಿ ಆನಂದ್ ಬಿ ಅಡಿಗ, ರಾಜ್ಯ ಸಹಾಯಕ ಸಂಘಟನ ಆಯುಕ್ತರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸುಮನ್ ಶೇಖರ್, ಪ್ರವೀಣ್ ಆಚಾಯ೯ KVSM ಕಾಲೇಜು, SVS ಪದವಿ ಪೂರ್ವ ಕಾಲೇಜು, ವಿದ್ಯಾ ಲಕ್ಷ್ಮೀ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಟ್, ವೈಕುಂಠ ಬಾಳಿಗ ಕಾನೂನು ವಿದ್ಯಾಲಯದಯ ಉಪನ್ಯಾಸಕರು ಹಾಗೂ ವಿವಿಧ ಸಂಸ್ಥೆಗಳ ಪಧಾದಿಕಾರಿಗಳು ಭಾಗವಹಿಸಿದ್ದರು.
ಈ ಸಂಧಭ೯ದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ದಾನಿಗಳ ಸಮ್ಮುಖದಲ್ಲಿ ಅಶಕ್ತವಿದ್ಯಾರ್ಥಿಗಳಾದ
ಕಮಲಾ ಪಿ ಐತಾಳ್ ಹಂಗಾರಕಟ್ಟೆ, ಅವಿನಾಶ್ ಮೂಡು ಅಲೆವೂರು, ವಿನೀಶ್ ಎಸ್ ಸಂತೆಕಟ್ಟೆ ಹಾಗೂ ಹೃದಯದ ಶಸ್ತ್ರ ಚಿಕಿತ್ಸೆ ಮಾಡಲು ಇರುವ 2 ವಷ೯ 7 ತಿಂಗಳಿನ ಮಗು ಪೀಯುಷ್ ಕುಮಾರ್ ಹಂಪನಕಟ್ಟೆ . ಪ್ರತಿ ಒಬ್ಬರಿಗೆ ತಲಾ 10,000 ರೂಪಾಯಿ ಚೆಕ್ ವಿತರಿಸಲಾಯಿತ್ತು.
ಕಾಯ೯ಕ್ರಮದ ನಿರೂಪಣೆಯನ್ನು ಶಮಿ೯ನಾ ಬಾನು, ಸ್ವಾಗತವನ್ನು ಅಮೃತ್, ಪ್ರಸ್ತಾವಿಕ ಮಾತು ಹಿತೇಶ್ ಆರ್ ಶೆಟ್ಟಿ, ಅಭಿಪ್ರಾಯ ಶ್ರೇಯಸ್ಸ್, ಧನ್ಯವಾದವನ್ನು ಸೃಜನ್ ಎಸ್ ಶೇರಿಗಾರ್ ವಾಚಿಸಿದ್ದರು.