• February 20, 2025

ಕಾಜೂರು ಉರೂಸ್ ಪ್ರಯುಕ್ ಪ್ರತಿದಿನ ಉಪನ್ಯಾಸ ಮಾಲಿಕೆ: ಪ್ರಮುಖ ವಿದ್ವಾಂಸರಿಂದ ಧರ್ಮ ಸಂದೇಶ, ಬರ್ದಾ ಸಂಗಮ

 ಕಾಜೂರು ಉರೂಸ್ ಪ್ರಯುಕ್ ಪ್ರತಿದಿನ ಉಪನ್ಯಾಸ ಮಾಲಿಕೆ: ಪ್ರಮುಖ ವಿದ್ವಾಂಸರಿಂದ ಧರ್ಮ ಸಂದೇಶ, ಬರ್ದಾ ಸಂಗಮ

 

ಬೆಳ್ತಂಗಡಿ; ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಶ್ರದ್ಧಾ ಕೇಂದ್ರ ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜ.24 ರಿಂದ ಪ್ರತಿದಿನ ರಾತ್ರಿ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.


ಸಯ್ಯಿದ್‌ ಕಾಜೂರು ತಂಙಳ್ ರಿಂದ ಉದ್ಘಾಟನೆಗೊಂಡ ಈ‌ ಪ್ರವಚನ ಮಾಲಿಕೆಯಲ್ಲಿ ಕಿಲ್ಲೂರು ಖತೀಬ್ ಶಂಶೀರ್ ಸಖಾಫಿ ಪರಪ್ಪು, ಮುಹಮ್ಮದ್ ತೌಸೀಫ್ ಸ‌ಅದಿ ಹರೇಕಳ‌, ಯಾಸಿರ್ ಸಖಾಫಿ ಅಲ್‌ಅಝ್ಹರಿ ಮಲಪ್ಪುರಂ, ಅಬೂಬಕ್ಕರ್ ಸಿದ್ದೀಕ್‌ ಜಲಾಲಿ‌ ಕಕ್ಕಿಂಜೆ, ಅಬ್ದುಲ್ ಅಝೀಝ್ ಅಶ್ರಫಿ‌ ಪಾಣತ್ತೂರು, ಮುಹಮ್ಮದ್ ಇರ್ಷಾದ್ ಸಖಾಫಿ ಅಲ್ ಅಝ್ಹರಿ ಮಲಪ್ಪುರಂ ಇವರು ಪ್ರವಚನ ನಡೆಸಿಕೊಟ್ಟಿದ್ದಾರೆ.


ವಿವಿಧ ದಿನಗಳಲ್ಲಿ ಸಯ್ಯಿದರುಗಳಾದ ಇಸ್ಮಾಯಿಲ್ ತಂಙಳ್ ಉಜಿರೆ, ಮುಖ್ತಾರ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕೇರಳ, ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಇವರು‌ ಭಾಗಿಯಾಗಿದ್ದರು.


ಹಾಫಿಳ್ ಸ್ವಾದಿಕ್ ಅಲಿ‌ ಫಾಳಿಲಿ ಗೂಡಲ್ಲೂರು ಮತ್ತು ಸಂಗಡಿಗರಿಂದ ಬುರ್ದಾ ಮಜ್ಲಿಸ್ ಕೂಡ ನಡೆಯಿತು.
ಕಾಜೂರು ಮತ್ತು ಕಿಲ್ಲೂರು ಜಂಟಿ ಉರೂಸ್ ಸಮಿತಿ ನೇತೃತ್ವದಲ್ಲಿ ನಡೆಯುವ ಈ ಸಮಾರಂಭಕ್ಕೆ ಖಾಝಿ ಎ.ಪಿ ಉಸ್ತಾದ್ ಮತ್ತು ಗೌರವಾಧ್ಯಕ್ಷ ಕುಂಬೋಳ್ ತಂಙಳ್ ಮಾರ್ಗದರ್ಶನ ನೀಡುತ್ತಿದ್ದು ಕಾಜೂರು ತಂಙಳ್ ನೇತೃತ್ವ ವಹಿಸುತ್ತಿದ್ದಾರೆ.


ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು,‌ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು,‌ ಕಿಲ್ಲೂರು ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಹಾಗೂ ಕಾಜೂರಿನ ಎಲ್ಲಾ ಪೂರ್ವಾಧ್ಯಕ್ಷರುಗಳು ಭಾಗವಹಿಸುತ್ತಿದ್ದಾರೆ.

ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗಯಯ್ಯುತ್ತಿದ್ದಾರೆ. ಜಂಟಿ‌ ಉರೂಸ್ ಸಮಿತಿ ಪದಾಧಿಕಾರಿಗಳು, ಅಧೀನ ಮಸ್ಜಿದ್ ಮತ್ತು ಮದರಸಗಳ ಧರ್ಮಗುರುಗಳು ಸಹಕಾರ ನೀಡುತ್ತಿದ್ದಾರೆ. ಪ್ರತಿ ದಿನ‌ ಆರ್‌ಡಿಸಿ ವತಿಯಿಂದ ದಫ್ಫ್ ಕಾರ್ಯಕ್ರಮ ಮಡೆಯುತ್ತಿದೆ.

ಫೆ.2 ; ಉರೂಸ್ ಸಮಾರೋಪ

ಫೆ.2 ರಂದು ಉರೂಸ್ ಮಹಾಸಂಭ್ರಮದ ಸಮಾರೋಪ ಮತ್ತು ಮಹಾ ಅನ್ನದಾನ ನಡೆಯಲಿದೆ. ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಯ್ಯಿದ್‌ ಕುಂಬೋಳ್ ತಂಙಳ್, ಶಿಹಾಬುದ್ದೀನ್ ಮುತ್ತನ್ನೂರು ತಂಙಳ್, ವಕ್ಫ್ ಮಾಜಿ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ, ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ಅಧ್ಯಕ್ಷ ಹನೀಫ್ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!