ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮೊಗ್ರು ಗ್ರಾಮದ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ ಮುಗೇರಡ್ಕ:ನೂತನ ಜೈ ಶ್ರೀ ರಾಮ್ ಮಹಿಳಾ ಸಂಘ ರಚನೆ,ಪದಾಧಿಕಾರಿಗಳ ನೇಮಕ
ಮೊಗ್ರು : ಸೆ 22 ಮೊಗ್ರು ಗ್ರಾಮದ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ ಮುಗೇರಡ್ಕ ಇದರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ನೂತನವಾಗಿ ಜೈ ಶ್ರೀ ರಾಮ್ ಮಹಿಳಾ ಸಂಘ ರಚನೆ,ಪದಾಧಿಕಾರಿಗಳ ನೇಮಕ ಮಾಡಲಾಯಿತು.ಅಧ್ಯಕ್ಷರಾಗಿ ತೀರ್ಥ ಮುಂಡಾಜೆ,ಉಪಾಧ್ಯಕ್ಷರಾಗಿ ಶಶಿಪ್ರಭಾ ಕೊಂಬೇಡಿ, ಮಮತಾ ಕೆಲೆಂಜಿಮಾರು ಕಾರ್ಯದರ್ಶಿಯಾಗಿ ಭವ್ಯಾ ಗಣೇಶ್ ಕೇದಗೆದಕೋಡಿ,
ಜೊತೆ ಕಾರ್ಯದರ್ಶಿಗಳಾಗಿ ಮಂಜುಶ್ರೀ ಊoತನಾಜೆ,ಸುಮ ಎರ್ಮಳ,ಕೋಶಾಧಿಕಾರಿಯಾಗಿ ಸವಿತಾ ಪದ್ಮುಂಜ,ಭವ್ಯ ಪರಕ್ಕಜೆ
ಹಾಗೂ ಸಮಿತಿ ಸದಸ್ಯರ ನೇಮಕ ಮಾಡಲಾಯಿತು.ಮತ್ತು ಮುಂದಿನ ಶಾರದಾ ಪೂಜಾ ಮತ್ತು ಆಯುಧ ಪೂಜೆ ಕಾರ್ಯಕ್ರಮದ ಬಗ್ಗೆ ಮತ್ತು ಬೆಳ್ಳಿ ಹಬ್ಬದ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ- ಮುಗೇರಡ್ಕ ಇದರ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಮಾತಾಜಿಯರು ಸ್ವಾಗತಿಸಿ ವಂದನೆ ಸಲ್ಲಿಸಿ, ಕಾರ್ಯಕ್ರಮ ನಿರೂಪಿಸಿದರು.