ಮದ್ದಡ್ಕ ಹೆಲ್ಪ್‌ಲೈನ್ ಎಂಡ್ ಚಾರಿಟೇಬಲ್ ಫೌಂಡೇಶನ್ ಇದರ ವಾರ್ಷಿಕ ಮಹಾಸಭೆ
ಬೆಳ್ತಂಗಡಿ; ಮದ್ದಡ್ಕ ಹೆಲ್ಪ್‌ಲೈನ್ ಎಂಡ್ ಚಾರಿಟೇಬಲ್ ಫೌಂಡೇಶನ್ ಇದರ ವಾರ್ಷಿಕ ಮಹಾಸಭೆಯು
ಸೆ.16 ರಂದು ಸಿರಾಜ್ ಚಿಲಿಂಬಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಮುಸ್ತಫಾ ಹೆಚ್.ಎಸ್ ವರದಿ ಮಂಡಿಸಿದರು. ಶಾಕೀರ್ ಚಿಲಿಂಬಿ ಸ್ವಾಗತಿಸಿದರು. ನಂತರ ಸಂಸ್ಥೆಯ ಆಗುಹೋಗುಗಳ ಬಗ್ಗೆ ಚರ್ಚಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಯಿತು.
ಸಂಘಟನೆಯ 2024-25 ಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಅಸ್ಲಂ ನೇರಳಕಟ್ಟೆ,
ಪ್ರಧಾನ ಕಾರ್ಯದರ್ಶಿಯಾಗಿ ಆರಿಸ್ ಶಾಫಿ, ಕೋಶಾಧಿಕಾರಿಯಾಗಿ ಸಾದಿಕ್ ದರ್ಕಾಸ್, ಉಪಾಧ್ಯಕ್ಷ ರಾಗಿ ಝಹೀರ್ ಬಿನಾ ಮತ್ತು ಪಯಾಝ್ ಸಬರಬೈಲ್, ಸಹ ಕಾರ್ಯದರ್ಶಿಗಳಾಗಿ ರಿಯಾಝ್ ಮುನ್ಕೂರ್ ಮತ್ತು ಆಶಿಕ್ ಚಿಲಿಂಬಿ,
ಗೌರವ ಸಲಹೆಗಾರರಾಗಿ ಸಮದ್ ಚಮ್ಮು, ಇಲ್ಯಾಸ್ ಚಿಲಿಂಬಿ ಮತ್ತು ಶಾಕೀರ್ ಚಿಲಿಂಬಿ ಇವರನ್ನು ಆರಿಸಲಾಯಿತು.
ಸಂಸ್ಥೆಯ ಸಪ್ಲೈ ಗ್ರೂಪಿನ ಜವಾಬ್ಧಾರಿಯನ್ನು ಇರ್ಷಾದ್ ಎಂ ಹೆಚ್ ಕಿನ್ನಿಗೋಳಿ ರವರಿಗೆ ನೀಡಲಾಯಿತು.
ಸಭೆಯಲ್ಲಿ ಸುಮಾರು 40ರಷ್ಟು ಸದಸ್ಯರು ಭಾಗವಹಿಸಿದ್ದರು.