ಮದ್ದಡ್ಕ: ಅ.2: ನಿವೃತ್ತಿ ಹೊಂದಿದ ಹೆಮ್ಮೆಯ ಯೋಧ ಮಂಜುನಾಥ ಹಾಗೂ ” ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ( ವಿ.ಕೆ ವಿಟ್ಲ) ಇವರಿಗೆ ನಾಗರಿಕ ಅಭಿನಂದನಾ ಸಮಾರಂಭ
ಮದ್ದಡ್ಕ: ಭಾರತೀಯ ಭೂಸೇನೆಯಲ್ಲಿ ಸುಧೀರ್ಘ 24 ವರ್ಷ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ, ತಾಯ್ನಾಡಿಗೆ ಆಗಮಿಸುತ್ತಿರುವ ಹೆಮ್ಮೆಯ ಯೋಧ ಮಂಜುನಾಥ ಇವರಿಗೆ ಹಾಗೂ ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ” ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ(ವಿ.ಕೆ ವಿಟ್ಲ) ಇವರಿಗೆ ಅ.2 ರಂದು ಸಮುದಾಯ ಭವನ ಮದ್ದಡ್ಕದಲ್ಲಿ ನಾಗರಿಕ ಅಭಿನಂದನಾ ಸಮಾರಂಭವು ನಡೆಯಲಿದೆ.
ತುಳುಕೂಟ ಬರೋಡ ಅಧ್ಯಕ್ಷ ಶಶಿಧರ ಬಿ ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಕಾರ್ಕಳ ಅಂಕಣಕಾರರು ಆದರ್ಶ್ ಗೋಖಲೆ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಅ.2 ರಂದು ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿನ್ನಿಗೋಳಿಯ ವರೆಗೆ ಯೋಧರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ, ನಂತರ ಮದ್ದಡ್ಕ – ಕಿನ್ನಿಗೋಳಿಯಿಂದ ಭವ್ಯ ಮೆರವಣಿಗೆಯಲ್ಲಿ ಸೈನಿಕ ಶಿಕ್ಷಕರನ್ನು ಸಭಾಂಗಣಕ್ಕೆ ಕರೆತರಲಿದ್ದು, ವೈಯಕ್ತಿಕ ಹಾಗೂ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ