ಮತಗಟ್ಟೆಗಳಲ್ಲಿ ಈ ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ! ಇಲ್ಲಿದೆ ನೋಡಿ ಡೀಟೇಲ್ಸ್
ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 7 ರಂದು 2ನೇ ಹಂತದ ಚುನಾವಣೆ ನಡೆಯಲಿದೆ.
26ಕ್ಕೆ ಮೊದಲ ಹಂತದ ಲೋಕ ಮತದಾನ ಹಿನ್ನೆಲೆ, ಮತಗಟ್ಟೆಗಳಲ್ಲಿ ಕೋವಿಡ್ ಹಾಗೂ ಹೀಟ್ ವೇವ್ ಮುನ್ನೆಚ್ಚರಿಕೆ ನೀಡಿದೆ ಆರೋಗ್ಯ ಇಲಾಖೆ. ಕೋವಿಡ್ ಪ್ರಕರಣಗಳು ಹತೋಟಿಯಲ್ಲಿದ್ದರೂ CAB ಅನುಸರಿಸುವಂತೆ ಸೂಚನೆ ನೀಡಿದೆ.
ಸದ್ಯ ಹವಾಮಾನದಲ್ಲಿ ತಾಪಮಾನ ಹೆಚ್ಚಿರೋದರಿಂದ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಮತದಾನದ ದಿನದಂದು ಮತಗಟ್ಟೆಗಳಲ್ಲಿ ಸಮರ್ಪಕವಾದ ಮೆಡಿಕೆಲ್ ಕಿಟ್ ಪೂರೈಕೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ಮತದಾರರ ಹಾಗೂ ಸಿಬ್ಬಂದಿ ಹಿತದೃಷ್ಟಿಯಿಂದ ಮತಗಟ್ಟೆಗಳಲ್ಲಿ ORS ಇರಿಸಬೇಕು.ಪ್ರತಿ ಮತಗಟ್ಟೆಗಳಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ತಿಳಿಸಲಾಗಿದೆ.
ಆರೋಗ್ಯ ಸಿಬ್ಬಂದಿ ಹಾಗೂ ಹೀಟ್ ವೇವ್ ಸಂಬಂಧ ಆರೋಗ್ಯ ಇಲಾಖೆಯ ಗೈಡ್ ಲೈನ್ಸ್ ಪಾಲಿಸಬೇಕು. ಜೊತೆಗೆ ಚುನಾವಣಾ ಸಿಬ್ಬಂದಿ ಕಡ್ಡಾಯಾವಗಿ ಕೊಡೆ, ಹ್ಯಾಟ್, ಇನ್ನಿತರ ಬಿಸಿಲು ತಡೆಯುವ ಸಾಮಾಗ್ರಿಗಳನ್ನು ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಭಾರತದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಿಂದ ಮತದಾನ ಆರಂಭವಾಗಲಿದ್ದು, ಜೂನ್ 1ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 4, 2024ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಮೊದಲ ಹಂತದ ಚುನಾವಣೆ- ಏಪ್ರಿಲ್ 19, 2024, 2ನೇ ಹಂತದ ಚುನಾವಣೆ- ಏಪ್ರಿಲ್ 26, 2024,3ನೇ ಹಂತದ ಚುನಾವಣೆ- ಮೇ 7, 2024, 4ನೇ ಹಂತದ ಚುನಾವಣೆ- ಮೇ 13, 2024, 5ನೇ ಹಂತದ ಚುನಾವಣೆ- ಮೇ 20, 2024, 6ನೇ ಹಂತದ ಚುನಾವಣೆ- ಮೇ 25, 2024, 7ನೇ ಹಂತದ ಚುನಾವಣೆ- ಜೂನ್ 1, 2024.