• July 16, 2024

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತಾಧಿಗಳ ಗಮನಕ್ಕೆ: ದೇವರ ದರ್ಶನದಲ್ಲಿ ಕೊಂಚ ಬದಲಾವಣೆ

 ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತಾಧಿಗಳ ಗಮನಕ್ಕೆ: ದೇವರ ದರ್ಶನದಲ್ಲಿ ಕೊಂಚ ಬದಲಾವಣೆ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆಯಲು ತಂಡೋಪತಂಡವಾಗಿ ಭಕ್ತಾದಿಗಳು ಆಗಮಿಸಿ ದೇವರನ್ನು ದರ್ಶಿಸಿ ಪುನೀತರಾಗುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯನ್ನು ಕಟ್ಟಿಕೊಂಡು ಧರ್ಮಸ್ಥಳಕ್ಕೆ ಬರುತ್ತಾರೆ. ಧರ್ಮಸ್ಥಳದ ಶ್ರೀಮಂಜುನಾಥನ ದರ್ಶನ ಮಾಡುವವರು ಬೆಳಗ್ಗಿನ ದರ್ಶನಕ್ಕೆ ಹೋಗೋಕೆ ಹೋಗಬೇಡಿ. ಯಾಕೆಂದರೆ ದರ್ಶನ ಮಾಡುವ ವೇಳೆಯಲ್ಲಿ ಕೊಂಚ ಬದಲಾವಣೆಯನ್ನು ತರಲಾಗಿದೆ.

ವಿಷು ಜಾತ್ರೆ ನಡೆಯುತ್ತಿರುವ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 23ರವರೆಗೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯುವವರು ಬೆಳಗ್ಗೆ 8:30ರ ಮೇಲೆ ದರ್ಶನ ಮಾಡುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಬೆಳಗ್ಗೆ 8:30ರ ನಂತರ ಎಂದಿನಂತೆ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಬದಲಾವಣೆ ಇರುವುದಿಲ್ಲ. ಭಕ್ತಾದಿಗಳು ಎಂದಿನಂತೆ ದರ್ಶನ ಪಡೆಯಬಹುದಾಗಿದೆ. ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಶ್ರದ್ಧಾ ಭಕ್ತಿಯ ತಾಣವಾಗಿದೆ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇದೆ. ಏಕಶಿಲೆಯ ಬೃಹದಾಕಾರದ ಗೊಮ್ಮಟೇಶ್ವರ ವಿಗ್ರಹ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಧರ್ಮಸ್ಥಳದ ಆಡಳಿತ ಮಂಡಳಿಯು ಹಲವಾರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.

ಧರ್ಮಸ್ಥಳಕ್ಕೆ ಹೋದವರು ಯಾರೂ ಕೂಡ ಹಸಿದ ಹೊಟ್ಟೆಯಲ್ಲಿ ಹೋಗಬಾರದು ಎಂಬುವುದರಿಂದ ಶ್ರೀಕ್ಷೇತ್ರದಲ್ಲಿ ಅನ್ನದಾಸೋಹವನ್ನು ನಿರಂತರವಾಗಿ ಮಾಡಿಕೊಂಡು ಬದಲಾಗುತ್ತಿದೆ. ಧರ್ಮಸ್ಥಳದಲ್ಲಿರುವ ದೇವಸ್ಥಾನದ ಹತ್ತಿರದಲ್ಲೇ ಹಳೆಯ ಕಾರುಗಳ ವಸ್ತುಸಂಗ್ರಹಾಲಯವಿದೆ. ಹಳೆಯ ಹಸ್ತಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಧರ್ಮಸ್ಥಳದಲ್ಲಿವೆ.

ಧರ್ಮಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ ಬೆಂಗಳೂರು, ಮೈಸೂರು, ಮಂಗಳೂರು, ಗೋಕರ್ಣ, ಎಲ್ಲ ಕಡೆಯಿಂದಲೂ ಕೂಡ ಸಾರಿಗೆ ವ್ಯವಸ್ಥೆ ಲಭ್ಯವಿದೆ. ಮಂಗಳೂರುವರೆಗೂ ರಸ್ತೆ, ರೈಲು, ವಿಮಾನಯಾನ ಸೌಲಭ್ಯವಿದೆ.

Related post

Leave a Reply

Your email address will not be published. Required fields are marked *

error: Content is protected !!