ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಪ್ರಾಣಿಗೆ ಶೂ ಯೋಜನೆ! ಎಲ್ಲಿ ಗೊತ್ತಾ?
ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳ ಸಂಕುಲಕ್ಕೂ ಜೀವನ ಮಾಡೋದೇ ಕಷ್ಟ ಆದಂತಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಪೊಲೀಸರು ಹೊಸ ಯೋಜನೆಯನ್ನು ಮಾಡಿದ್ದಾರೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಯೋಜನೆ ಮಾಡಲಾಗಿದೆ.
ಪೊಲೀಸ್ ಶ್ವಾನಗಳಿಗೆ ಶೂ ಭಾಗ್ಯ ದೊರೆತಿದೆ. ಕಲಬುರಗಿ ಜಿಲ್ಲಾ ಪೊಲೀಸ್ ಶ್ವಾನಗಳಿಗೆ ಶೂ ಹಾಕಲಾಗಿದೆ. ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಶ್ವಾನಗಳಿಗೆ ಶೂ ಹಾಕಿದಂತಾಗಿದೆ. ಅಲ್ಲದೇ ಶ್ವಾನಗಳಿಗೆ ಬಿಸಿಲ ಬೇಗೆ ತಡೆಯಲು ಏರ್‌ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಶ್ವಾನಗಳಿಗೆ ಶೂ ಭಾಗ್ಯ
ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ಶ್ವಾನಗಳಿಗೆ ಶೂ ಭಾಗ್ಯ ಒದಗಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆದ ನಾಲ್ಕು ಶ್ವಾನಗಳಿಗೆ ಶೂ ಭಾಗ್ಯ ದೊರೆತಿದೆ.
ರಣಬಿಸಿಲಿನಿಂದ ಶ್ವಾನಗಳಿಗೆ ರಕ್ಷಣೆ
ಇನ್ನು ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ರಣಬಿಸಿಲಿನಿಂದ ಶ್ವಾನಗಳಿಗೆ ರಕ್ಷಣೆ ಕೊಡಲು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಯಾರಿಕೆಯಾದಗ ಸಾಬುದಾಣಿ ಗಂಜಿ, ರಾಗಿ ಗಂಜಿ, ಎಳನೀರಿನ ವ್ಯವಸ್ಥೆ ಮಾಡಲಾಗಿದೆ.